ನಾನೂ ಅಯ್ಯಪ್ಪಸ್ವಾಮಿಯ ದರುಶನ ಪಡೆಯಬೇಕು: ಮಾಲೆ ಧರಿಸಿ ಚರ್ಚ್​​ ಕೆಲಸಕ್ಕೆ ರಾಜೀನಾಮೆ ನೀಡಿದ ಪಾದ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನನಗೂ ಶಬರಿಮಲೆ ಅಯ್ಯಪ್ಪಸ್ವಾಮಿಯ ದರುಶನ ಪಡೆಯಬೇಕೆಂಬ ಬಯಕೆಯಿದೆ ಎಂದು ಚರ್ಚ್​ ಒಂದರ ಪಾದ್ರಿ ತಮ್ಮ ಪರವಾನಗಿಯನ್ನು ಹಿಂತಿರುಗಿಸಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.

ತಿರುವನಂತಪುರ ಮೂಲದ ರೇವ್​ ಮನೋಜ್​ ಕೆ.ಜಿ (50) ಎನ್ನುವ ಪಾದ್ರಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ 41ದಿನಗಳ ಕಠಿಣ ವ್ರತ ಕೈಗೊಂಡು ಆಂಗ್ಲಿಕನ್​ ಚರ್ಚ್​ ಆಫ್​ ಇಂಡಿಯಾ ಅಡಿಯಲ್ಲಿ ಬರುವ ಚರ್ಚ್​​ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರೇವ್​ ಮನೋಜ್​ , ನನ್ನ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಚರ್ಚ್​ ಆಡಳಿತ ಮಂಡಳಿಯು ಹೇಳಿತ್ತು. ತಮ್ಮ ನಿರ್ಧಾರದ ಕುರಿತು ವಿವರವಾದ ವಿವರಣೆಯನ್ನು ನೀಡುವಂತೆ ಆಡಳಿತ ಮಂಡಳಿ ಕೇಳಿತ್ತು. ನಾನು ವಿವರಣೆ ನೀಡುವ ಬದಲು ನನಗೆ ನೀಡಲಾಗಿದ್ದ ಪರವಾನಗಿ ಹಾಗೂ ಐಡಿ ಕಾರ್ಡ್​ಅನ್ನು ಹಿಂತಿರುಗಿಸಿದ್ದೇನೆ ಎಂದಿದ್ದಾರೆ.

ನಾನು ಮೊದಲಿಗೆ ದೇವರ ಸಿದ್ದಾಂತಗಳನ್ನು ಅಳವಡಿಸಿಕೊಂಡವನು. ದೇವರು ಯಾವುದೇ ಜಾತಿ, ಮತ, ಧರ್ಮ ಲೆಕ್ಕಿಸದೆ ಪ್ರೀತಿ ಮಾಡು ಎನ್ನುತ್ತಾರೆ. ಹೀಗಾಗಿ ಚರ್ಚ್​ಅನ್ನು ಪ್ರೀತಿಸಬೇಕೋ ಅಥವಾ ದೇವರನ್ನೋ ಎಂದು ನನಗೆ ತಿಳಿಯಲಿಲ್ಲ. ಚರ್ಚ್​ನ ಸಿದ್ದಾಂತಗಳಿಗೆ ತಕ್ಕಂತೆ ನಾನು ಕೆಲಸ ಮಾಡುವವನಲ್ಲ ಎಂದು ಹೇಳಿದ್ದಾರೆ. ಮನೋಜ್ ಅವರು ಸೆಪ್ಟೆಂಬರ್ 20ರಂದು ಶಬರಿಮಲೆಗೆ ಭೇಟಿ ನೀಡಲಿದ್ದಾರೆ.

ನಾನು ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದವ ಅಧ್ಯಾತ್ಮಿಕ ಭೋಧನೆಗಳಿಗೆ ಮಾಹಿತಿ ಕಲೆ ಹಾಕಲು ಪಾದ್ರಿಯಾದೆ. ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂಬ ಭಾವನೆ ನನಗಿದೆ. ಹಿಂದು ಧರ್ಮ ಮತ್ತು ಅದರಲ್ಲಿನ ಆಚರಣೆಗಳನ್ನು ಮೀರಿ ಅರ್ಥ ಮಾಡಿಕೊಳ್ಳುವುದು ನನ್ನ ಉದ್ದೇಶವಾಗಿದೆ ಎಂದು ಪಾದ್ರಿ ಮನೋಜ್​ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!