ಹೊಸದಿಗಂತ ಡಿಜಿಟಲ್ ಡೆಸ್ಕ್:
ದತ್ತಪೀಠದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆಗೆ ಹಿಂದೂ ಸಂಘಟನೆಗಳು ಮುಂದಾಗಿದ್ದು, ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ಹೋಳಿ ಹುಣ್ಣಿಮೆ ಹಿನ್ನೆಲೆ, ಹಿಂದೂ ಸಂಘಟನೆಗಳು ದತ್ತಪೀಠದಲ್ಲಿ ಹೋಳಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದವು. ಅಲ್ಲದೇ ಔಂದುಬರ ವೃಕ್ಷದ ಬಳಿ ಹೋಳಿ ಆಚರಣೆಗೆ ಅನುಮತಿ ಕೇಳಲಾಗಿತ್ತು. ಮಾ.15ರಿಂದ 3 ದಿನಗಳ ಕಾಲ ದತ್ತಪೀಠದಲ್ಲಿ ಉರುಸ್ ಆಚರಣೆ ನಡೆಯಲಿದ್ದು, ಹೋಳಿ ಆಚರಣೆಗೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದೆ.
ಉರುಸ್ ಹಿನ್ನೆಲೆ ದತ್ತಪೀಠ ಹಾಗೂ ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. 800ಕ್ಕೂ ಅಧಿಕ ಪೊಲೀಸರಿಂದ ಭಾರೀ ಭದ್ರತೆ ಕೈಗೊಳ್ಳಲಾಗಿದೆ.