ಹಿಂದುಗಳೇ ತಕ್ಷಣ ದೇಶ ಬಿಟ್ಟು ಹೋಗಿ: ಕೆನಡಾದಲ್ಲಿ ಉಗ್ರ ಖಲಿಸ್ತಾನದ ಸಹ ಸಂಘಟನೆ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆನಡಾದಲ್ಲಿ ಖಲಿಸ್ತಾನ ಸಂಘಟನೆ ಹೋರಾಟ ಹೆಚ್ಚುತ್ತಿದ್ದು, ಆದ್ರೆ ಸರಕಾರ ಮಾತ್ರ ಮೌನ ವಹಿಸಿದೆ.

ಖಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಎಲ್ಲೆಡೆ ಆಕ್ರೋಶ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೆ ಕೆನಡಾದಲ್ಲಿ ಇದೀಗ ಖಲಿಸ್ತಾನಿಗಳು ಹೋರಾಟ ತೀವ್ರಗೊಳಿಸಿದ್ದಾರೆ. ಕೆನಡಾದಲ್ಲಿರುವ ಹಿಂದುಗಳು ತಕ್ಷಣ ದೇಶ ಬಿಟ್ಟು ಹೋಗುವಂತೆ ಎಚ್ಚರಿಕೆ ನೀಡಿದ್ದಾನೆ. ಭಾರತ ಅಥವಾ ಇನ್ಯಾವುದೇ ದೇಶಕ್ಕೆ ತೆರಳಿ, ಆದರೆ ಕೆನಡಾದಲ್ಲಿ ಹಿಂದುಗಳು ಇರಬಾರದು ಎಂದು ಖಲಿಸ್ತಾನ ಬೆಂಬಲಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಬೆದರಿಕೆ ಹಾಕಿದೆ.

ನೀವು ಭಾರತವನ್ನು ಬೆಂಬಲಿಸುವುದರ ಜೊತೆ ಪ್ರೋ ಖಲಿಸ್ತಾನ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಸಿಖ್ ಫಾರ್ ಜಸ್ಟೀಸ್ ಸಂಘಟನೆ ನಾಯಕ ಗುರುಪತ್ವಂತ್ ಪನ್ನು ಎಚ್ಚರಿಕೆ ನೀಡಿದ್ದಾರೆ.

2019ರಲ್ಲಿ ಖಲಿಸ್ತಾನ ಬೆಂಬಲಿತ ಸಿಖ್ ಫಾರ್ ಜಸ್ಚೀಸ್ ಸಂಘಟನೆ ಭಾರತದಲ್ಲಿ ನಿಷೇಧಿಸಲಾಗಿದೆ. ಗುರುಪತ್ವಂತ್ ಸಿಂಗ್ ಪನ್ನು ಉಗ್ರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದೀಗ ಹರ್ದೀಪ್ ಸಿಂಗ್ ನಿಜ್ಜರ್ ಸಾವಿಗೆ ಪ್ರತೀಕಾರ ತೀರಿಸಲು ಈ ಉಗ್ರ ಸಂಘಟನೆ ಸಜ್ಜಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!