Friday, December 8, 2023

Latest Posts

ನಟಿ ಸಾಯಿ ಪಲ್ಲವಿ ಮದುವೆಯಾದ್ರಾ?: ಫೋಟೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಾಯಿ ಪಲ್ಲವಿ (Sai Pallavi) ಮದುವೆಯಾದ್ರಾ ? ಹೀಗೊಂದು ಪ್ರಶ್ನೆ ಈಗ ಎಲ್ಲಡೆ ಚರ್ಚೆಯಾಗುತ್ತಿದೆ.
ಇದಕ್ಕೆ ಕಾರಣ ನಟ ಶಿವಕಾರ್ತಿಕೇಯನ್ (Shivakarthikeyan) ಜೊತೆ ಹಾರ ಹಾಕಿಕೊಂಡು ನಿಂತಿರುವ ಫೋಟೋ ವೈರಲ್ ಆಗಿದ್ದು, ಅನೇಕರು ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ಜೋಡಿಗೆ ಶುಭ ಹಾರೈಸಿದ್ದಾರೆ.

ಆದ್ರೆ ಆ ಫೋಟೋ ವೈರಲ್ ಆಗುತ್ತಿದ್ದಂತೆಯೇ ಅಸಲಿಯತ್ತು ಹೊರ ಬಿದ್ದಿದೆ. ಅದು ಸಿನಿಮಾ ಮುಹೂರ್ತವೊಂದರ ಫೋಟೋವಾಗಿದ್ದು, ಸಹನಟನ ಜೊತೆ ಹಾರ ಹಾಕಿಕೊಂಡು ನಿಂತಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಮುಹೂರ್ತದ ದಿನದಂದು ಹೂವಿನ ಹಾರ ಹಾಕಿ ಗೌರವಿಸುವುದು ಸಂಪ್ರದಾಯ. ಆ ಫೋಟೋವನ್ನೇ ವೈರಲ್ ಮಾಡಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಸಾಯಿ ಪಲ್ಲವಿ ಕೆಲ ತಿಂಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದರು. ಕಾಶಿಯಾತ್ರೆಯನ್ನೂ ಸಹ ಪಾಲಕರೊಂದಿಗೆ ಮಾಡಿದ್ದರು. ಇದೀಗ ಮತ್ತೆ ಸಿನಿಮಾಗಳನ್ನು ಒಪ್ಪಿಕೊ‍ಳ್ಳುತ್ತಿದ್ದು, ಈ ಸಂದರ್ಭದ ಫೋಟೋವನ್ನು ಮದುವೆ ಎಂದು ಹಬ್ಬಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!