ಕಾಂಗ್ರೆಸ್ ನಿಂದ ಹಿಂದು ಜನರ ಭಾವನೆಗಳಿಗೆ ಧಕ್ಕೆ: ಹಾರ್ದಿಕ್ ಪಟೇಲ್ ವಾಗ್ದಾಳಿ

ಹೊಸದಿಗಂತ ಜಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್ ಹಿಂದು ಜನರ ಭಾವನೆಗಳಿಗೆ ಧಕ್ಕೆ ತರಲು ಕೆಲಸ ಮಾಡುತ್ತಿತ್ತಿದೆ ಎಂದು ಪಕ್ಷದ ಮಾಜಿ ನಾಯಕ ಹಾರ್ದಿಕ್ ಪಟೇಲ್ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಹಳೆಯ ಪಕ್ಷ ಮತ್ತು ಅದರ ಹಿರಿಯ ನಾಯಕ ಭರತ್ ಸಿಂಗ್ ಸೋಲಂಕಿ ವಿರುದ್ಧ ವಾಗ್ದಾಳಿ ನಡೆಸಿದ ಹಾರ್ದಿಕ್ ಪಟೇಲ್, ಕಾಂಗ್ರೆಸ್ ಪಕ್ಷ ಜನರ ಭಾವನೆಗಳನ್ನು ನೋಯಿಸುವ ಕೆಲಸ ಮಾಡುತ್ತದೆ. ಯಾವಾಗಲೂ ಹಿಂದು ಧರ್ಮದ ನಂಬಿಕೆಯನ್ನು ಹಾಳುಮಾಡಲು ಪ್ರಯತ್ನಿಸುತ್ತದೆ ಎಂದು ನಾನು ಮೊದಲೇ ಹೇಳಿದ್ದೇನೆ.ಇಂದು, ಮಾಜಿ ಕೇಂದ್ರ ಸಚಿವ ಮತ್ತು ಗುಜರಾತ್ ಕಾಂಗ್ರೆಸ್ ನಾಯಕರೊಬ್ಬರು ರಾಮಮಂದಿರಕ್ಕಾಗಿ ಇಟ್ಟಿರುವ ಇಟ್ಟಿಗೆಗಳ ಮೇಲೆ ನಾಯಿಗಳು ಮೂತ್ರ ವಿಸರ್ಜಿಸುತ್ತವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಮತ್ತು ಅದರ ನಾಯಕರಿಗೆ ಭಗವಾನ್ ಶ್ರೀರಾಮನೊಂದಿಗೆ ಏನು ದ್ವೇಷವಿದೆ ಎಂದು ನಾನು ಕೇಳಲು ಬಯಸುತ್ತೇನೆ. ಹಿಂದುಗಳನ್ನು ಇಷ್ಟು ದ್ವೇಷಿಸುವುದೇಕೆ? ಶತಮಾನಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ಆದರೂ ಕಾಂಗ್ರೆಸ್ ನಾಯಕರು ಭಗವಾನ್ ಶ್ರೀರಾಮನ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ತೊರೆದ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!