CINE NEWS | ‘ಪ್ರತಿ ಆಡಿಷನ್‌ನಲ್ಲೂ ಸೋತಾಗ ಇವರ ಮಾತೇ ನನಗೆ ಸ್ಫೂರ್ತಿಯಾಗಿತ್ತು’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಸಾನ್ ಸಿನಿಮಾ ನಂತರ ವಿಕ್ಕಿ ಕೌಶಲ್ ಖ್ಯಾತಿ ಹೆಚ್ಚಾಯ್ತು. ಮಸಾನ್ ನಂತರ ಬಂದ ಉರಿ ಸಿನಿಮಾದಿಂದ ವಿಕ್ಕಿ ಕೌಶಲ್ ಎಲ್ಲರ ಮನೆ ಮಾತಾದರು.
ಉರಿ ನಂತರ ಬಂದ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆದವು. ಬಾಲಿವುಡ್ ಬೆಡಗಿ ಕಟ್ರಿನಾ ಕೈಫ್ ಅವರನ್ನೂ ವಿಕ್ಕಿ ಮದುವೆಯಾದರು. ಆದರೆ ಶೋ ಒಂದರಲ್ಲಿ ವಿಕ್ಕಿ ತಮ್ಮ ಆಡಿಷನ್ ದಿನಗಳ ಬಗ್ಗೆ ಮಾತನಾಡಿದ್ದಾರೆ.

ನಾನು ಏಕಾಏಕಿ ಹೀರೋ ಆದವನಲ್ಲ, ನನಗೆ ಬ್ಯಾಕ್‌ಗ್ರೌಂಡ್ ಕೂಡ ಇಲ್ಲ, ಗಾಡ್ ಫಾದರ್ ಇಲ್ಲ. ಸಿನಿಮಾಗೆ ಎಂಟ್ರಿ ಕೊಟ್ಟಿದ್ದು, ಸಾಮಾನ್ಯನಂತೆ. ಆಡಿಷನ್‌ಗಳ ಮೂಲಕ ಎಂದು ವಿಕ್ಕಿ ಹೇಳುತ್ತಾರೆ.

ಒಂದಲ್ಲಾ ಎರಡಲ್ಲ ನೂರಾರು ಆಡಿಷನ್ ನೀಡಿದ್ದೇನೆ, ರಿಜೆಕ್ಟ್ ಕೂಡ ಆಗಿದ್ದೇನೆ. ಆಗ ಮನೆಗೆ ಬಂದು ನನ್ನಮ್ಮನ ತೊಡೆ ಮೇಲೆ ಮಲಗಿ ನನಗೇ ಏಕೆ ಹೀಗೆ ಆಗುತ್ತದೆ. ಸಿನಿಮಾ ಫೀಲ್ಡ್ ನನಗೆ ಬೇಡ ಎಂದು ನೋವು ಹೇಳುತ್ತಿದೆ. ಆಗ ಅಮ್ಮ ಹೇಳುತ್ತಿದ್ದಳು, ಯಾವಾಗ ಏನು ಆಗುತ್ತದೆ ಎನ್ನುವ ಚಿಂತೆ ಬಿಡು, ನಂಬಿಕೆಯಿಟ್ಟು ಶ್ರದ್ಧೆಯಿಂದ ಕೆಲಸ ಮಾಡು, ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂದು ಅಮ್ಮ ಹೇಳಿದ್ದರು. ಅವರ ಒಂದು ಮಾತು ಮತ್ತಷ್ಟು ಆಡಿಷನ್ ಕೊಡಲು ಸ್ಫೂರ್ತಿ ನೀಡಿತ್ತು ಎಂದು ವಿಕ್ಕಿ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!