ಗುಜರಾತ್‌ ಚುನಾವಣೆ: 10 ವರ್ಷದಿಂದ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಕ್ಷೇತ್ರದಲ್ಲಿ ಬಿಜೆಪಿಯ ಹಾರ್ದಿಕ್‌ ಪಟೇಲ್‌ ಗೆ ಭಾರಿ ಮುನ್ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರು ವಿರಾಮಗಮ್ ಕ್ಷೇತ್ರದಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಕ್ಷೇತ್ರ ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್‌ ತೆಕ್ಕೆಯಲ್ಲಿದೆ.
ಜೂನ್‌ನಲ್ಲಿ ಕಾಂಗ್ರೆಸ್‌ನಿಂದ ಕೇಸರಿ ಪಕ್ಷ ಸೇರಿರುವ ಹಾರ್ದಿಕ್ ಪಟೇಲ್‌ ಚೊಚ್ಚಲ ಕದನದಲ್ಲೇ ಗೆಲುವಿನತ್ತ ಮುನ್ನಡೆಯುತ್ತಿದ್ದಾರೆ. ಪಟೇಲ್ ಇಲ್ಲಿ ಒಬಿಸಿ ಅಭ್ಯರ್ಥಿ ಮತ್ತು ವಿರಾಮಗಾಮ್‌ನಿಂದ ಎರಡು ಅವಧಿಗೆ ಹಾಲಿ ಶಾಸಕರಾಗಿರುವ ಕಾಂಗ್ರೆಸ್‌ನ ಲಖಾ ಭಾರವಾಡ್ ಅವರ ಸ್ಫರ್ಧೆಯನ್ನು ಎದುರಿಸಿ ಗೆಲ್ಲಬೇಕಿದೆ.
ಹಾರ್ಡಿಕ್ ಪಟೇಲ್ 24,549 ಮತಗಳ ಮುನ್ನಡೆ ಗಳಿಸಿದ್ದು,  46% ರಷ್ಟು ಮತಗಳನ್ನು ಗಳಿಸಿ ಮುನ್ನಗ್ಗುತ್ತಿದ್ದಾರೆ. ಎಎಪಿಯ ಅಮರಸಿಂಹ ಅನದಾಜಿ ಠಾಕೂರ್ 17,195 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಲಖಾ ಭಾರವಾಡ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬಿಜೆಪಿಯ ಉತ್ತಮ ಆಡಳಿತವು ಜನರಲ್ಲಿ ನಂಬಿಕೆಯನ್ನು ಬಲಪಡಿಸಿದೆ ಎಂದು ಬಿಜೆಪಿಯ ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಬಿಜೆಪಿ ಜನರ ನಿರೀಕ್ಷೆಯನ್ನು ಈಡೇರಿಸಿದೆ ಎಂದು ಹಾರ್ದಿಕ್ ಪಟೇಲ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!