ಏರ್ ಇಂಡಿಯಾದಿಂದ ಐತಿಹಾಸಿಕ ಡೀಲ್: ಬೋಯಿಂಗ್ ನಿಂದ 500 ವಿಮಾನಗಳನ್ನು ಖರೀದಿಸಲು ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಏರ್ ಇಂಡಿಯಾವು ಐತಿಹಾಸಿಕ ನಿರ್ಧಾರವನ್ನು ಮಾಡಿದ್ದೂ, ಏರ್‌ಬಸ್ ಮತ್ತು ಬೋಯಿಂಗ್ ಯಿಂದ ಹತ್ತಾರು ಶತಕೋಟಿ ಡಾಲರ್‌ಗಳ ಮೌಲ್ಯದ 500 ಜೆಟ್‌ಲೈನರ್‌ಗಳಿಗೆ ಆರ್ಡರ್‌ಗಳನ್ನು ನೀಡಲು ಮುಂದಾಗಿದೆ .

ಏರ್‌ಬಸ್ A350 ಮತ್ತು ಬೋಯಿಂಗ್ 787 ಮತ್ತು 777 ಸೇರಿದಂತೆ 400 ಕಿರಿದಾದ ಜೆಟ್‌ಗಳು ಮತ್ತು 100 ಅಥವಾ ಅದಕ್ಕಿಂತ ಹೆಚ್ಚು ಅಗಲವಾದ ಜೆಟ್‌ಗಳು ಇದರಲ್ಲಿ ಸೇರಿವೆ. ಈ ಒಪ್ಪಂದ ಮುಂದಿನ ದಿನಗಳಲ್ಲಿಅಂತಿಮಗೊಳಿಸಲಿದೆ ಎನ್ನಲಾಗುತ್ತಿದೆ.

ಏರ್ ಇಂಡಿಯಾ ಆರಂಭದಲ್ಲಿ 50, 737 MAX ವಿಮಾನಗಳ ವಿತರಣೆಯನ್ನು ಪಡೆಯುವುವ ನಿರೀಕ್ಷೆಯಿದ್ದು, ಇನ್ನು ಕೆಲವೇ ದಿನಗಳಲ್ಲಿ ಏರ್ ಇಂಡಿಯಾ-ಬೋಯಿಂಗ್ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಅಮೆರಿಕದ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ 2023ರ ಮಾರ್ಚ್ ವೇಳೆಗೆ 50 ವಿಮಾನಗಳನ್ನು ತಲುಪಿಸುವುದಾಗಿ ಭರವಸೆ ನೀಡಿದೆ.

ಪ್ರಸ್ತುತ ಭಾರತದ ಅತಿದೊಡ್ಡ ಸಮೂಹ ಸಂಸ್ಥೆಯಾದ ಟಾಟಾ ಸನ್ಸ್ ನಾಲ್ಕು ವಿಮಾನಯಾನ ಸಂಸ್ಥೆಗಳನ್ನು ಹೊಂದಿದೆ. ಏರ್ ಇಂಡಿಯಾ ಮತ್ತು ಅದರ ಇತರ ಆರ್ಮ್ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಜೊತೆಗೆ ವಿಸ್ತಾರಾ ಮತ್ತು ಏರ್ ಏಷ್ಯಾ ಇಂಡಿಯಾದಲ್ಲಿ ಬಹುಪಾಲು ಪಾಲನ್ನು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!