ಗೋವಾದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮನೋಹರ್ ಪರಿಕ್ಕರ್ ಹೆಸರು ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗೋವಾದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ರಕ್ಷಣಾ ಸಚಿವ ,ಮಾಜಿ ಸಿಎಂ ಮನೋಹರ್ ಪರಿಕ್ಕರ್ ಹೆಸರಿಡಲಾಗಿದೆ.

ಈ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದರು.

ಪಣಜಿಯಿಂದ 35 ಕಿಲೋಮೀಟರ್ ದೂರದಲ್ಲಿರುವ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಪರ್ಕ ಮತ್ತಷ್ಟು ಸುಲಭವಾಗಿದೆ.

ಮೋದಿ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೊಂಡ ಬೆನ್ನಲ್ಲೇ ಇಂಡಿಗೋ ಹಾಗೂ ಗೋಫಸ್ಟ್ ವಿಮಾನ ಸೇವೆ ಘೋಷಿಸಿದೆ. ಇಂಡಿಗೋ 168 ವಿಮಾನ ಸೇವೆಗಳನ್ನು ಆರಂಭಿಸುತ್ತಿದೆ. ಇತ್ತ ಗೋಫಸ್ಟ್ 48 ವಿಮಾನ ಸೇವೆ ಆರಂಭಿಸುತ್ತಿದೆ. ನೂತನ ವಿಮಾನ ನಿಲ್ದಾಣದಿಂದ ಭಾರತದ ಇತರ ನಗರಗಳಿಗೆ ಸಂಪರ್ಕ ನೀಡಲು ವಿಮಾನ ಕಂಪನಿಗಳು ಮುಂದಾಗಿದೆ. ಶೀಘ್ರದಲ್ಲೇ ವಿಮಾನ ಸೇವೆ ಆರಂಭಗೊಳ್ಳಲಿದೆ.

ವಾಜಪೇಯಿ ಕಾಲದಲ್ಲಿ ಯೋಜನೆ ನನಸು
ವಿಮಾನ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಮೋದಿ,ಗೋವಾದ ಮೋಪಾದಲ್ಲಿನ ವಿಮಾನ ನಿಲ್ದಾಣಕ್ಕೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರ ಕಣ್ಣೆತ್ತಿ ನೋಡಲಿಲ್ಲ. ಆದರೆ 2016ರಲ್ಲಿ ನಾವು ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಿಲನ್ಯಾಸ ಮಾಡಿದ್ದೇವು. ಇದೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.

ದೇಶದಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವ ಕಾರ್ಯಕ್ಕೆ ಕಾಂಗ್ರೆಸ್ ಎಂದಿಗೂ ಗಮನಕೊಟ್ಟಿಲ್ಲ. ಹೆಚ್ಚಿನ ಯೋಜನೆಗಳನ್ನು ಆರಂಭಿಸಿಲ್ಲ. ಹಲವು ಯೋಜನೆಗಳು ಅರ್ಧಕ್ಕೆ ಕೈಬಿಟ್ಟಿದೆ. ಆದರೆ ಬಿಜೆಪಿ ಸರ್ಕಾರ ಯೋಜನೆ ಘೋಷಿಸಿ ಶಿಲನ್ಯಾಸ ಮಾಡಿ ಉದ್ಘಾಟನೆ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಈ ಹಿಂದಿನ ಸರ್ಕಾರಗಳು ವಿಮಾನ ನಿಲ್ದಾಣ ಅಭಿವೃದ್ಧಿ ಮಾಡುವ ಕಾರ್ಯಕ್ಕೆ ಕೈಹಾಕಿಲ್ಲ. ಕಾರಣ ಈ ಹಿಂದಿನ ಸರ್ಕಾರಗಳಿಗೆ ವಿಮಾನದಲ್ಲಿ ಪ್ರಯಾಣ ಶ್ರೀಮಂತರಿಗೆ ಮಾತ್ರ ಅನ್ನೋ ಭಾವನೆ ಇತ್ತು. ಆದರೆ ಇದೀಗ ದೇಶದ ಮೂಲೆ ಮೂಲೆಗೆ ವಿಮಾನ ನಿಲ್ದಾಣ ನೀಡಲಾಗಿದೆ. ಇದರಿಂದ ಸಂಪರ್ಕ ಅತೀ ಸರಳ ಹಾಗೂ ಸುಲಭವಾಗಿದೆ. ಇಷ್ಟೇ ಅಲ್ಲ ವಿಮಾನ ಪ್ರಯಾಣ ಈ ಹಿಂದಿನಂತೆ ದುಬಾರಿಯಲ್ಲ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!