ಐತಿಹಾಸಿಕ ಜಿ-20 ಶೃಂಗಸಭೆ: 73 ಘೋಷಣೆಗಳಿಗೆ ವಿಶ್ವನಾಯಕರ ಸಮ್ಮತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐತಿಹಾಸಿಕ ಜಿ-20 ಶೃಂಗಸಭೆಯು ಹಲವು ಮೊದಲುಗಳಿಗೆ ನಾಂದಿ ಹಾಡಿದೆ.ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವಸಭೆ ಇದಾಗಿದ್ದು, ವಿಶ್ವದಲ್ಲಿನ ಹಲವು ರಾಷ್ಟ್ರಗಳು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ 73 ಸಂಕಲ್ಪಗಳನ್ನು(ರೆಸಲ್ಯೂಶನ್​) ಅಂಗೀಕರಿಸಲಾಗಿದೆ. ಇದು ಈವರೆಗೂ ನಡೆಸಿದ ಶೃಂಗಸಭೆಯಲ್ಲಿ ಅತೀ ಹೆಚ್ಚು ಸಂಕಲ್ಪಗಳಾಗಿವೆ.

ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗವು ಒಟ್ಟಾರೆ 112 ಘೋಷಣೆಗಳನ್ನು ಹೊರಡಿಸಿದೆ. ಅವುಗಳಲ್ಲಿ 73 ಘೋಷಣೆಗಳನ್ನು ವಿಶ್ವದ ಎಲ್ಲ ನಾಯಕರು ಅಂಗೀಕರಿಸಿದ್ದರೆ, 39 ಘೋಷಣೆಗಳನ್ನು ದಾಖಲೆಯಲ್ಲಿ ಲಗತ್ತಿಸಿ ಮಂಡಿಸಲಾಗಿದೆ. ಇವೆಲ್ಲವೂ ಮಾನ್ಯತೆ ಪಡೆದಿವೆ ಎಂಬುದು ಗಮನಾರ್ಹ. ಈ ಮೂಲಕ ಒಂದು ವರ್ಷದಿಂದ ಭಾರತದಲ್ಲಿ ನಡೆಯುತ್ತಿರುವ ಹಲವು ಸಭೆಗಳು ಸಾರ್ಥಕತೆ ಪಡೆದಿವೆ .

ಕಳೆದ ವರ್ಷ (2022)ಇಂಡೋನೇಷ್ಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ 27 ಘೋಷಣೆಗಳು, 23 ದಾಖಲೆ ಸಹಿತ ರೆಸಲ್ಯೂಶನ್​ಗಳಿಗೆ ಅಂಗೀಕಾರ ಸಿಕ್ಕಿತ್ತು. 2021 ರಲ್ಲಿ ಇಟಲಿಯಲ್ಲಿ ನಡೆದ ಜಿ20 ಶೃಂಗದಲ್ಲಿ 36 ಸಂಕಲ್ಪಗಳಿಗೆ ಅಂಗೀಕಾರ, 29 ದಾಖಲೆಗಳ ಪ್ರಸ್ತುತಿ ಸೇರಿದಂತೆ 65 ಘೋಷಣೆಗಳನ್ನು ಮಾಡಲಾಗಿತ್ತು. ಇದು ಜಿ20 ಶೃಂಗದ ಇತಿಹಾಸದಲ್ಲೇ ಅತ್ಯಧಿಕವಾಗಿತ್ತು. ಇದೀಗ ಭಾರತ ಅಧ್ಯಕ್ಷತೆಯ ಶೃಂಗವು 112 ಘೋಷಣೆಗಳನ್ನು ಹೊರಡಿಸುವ ಮೂಲಕ ಚರಿತ್ರೆ ಸೃಷ್ಟಿಸಿದೆ.

ಭಾರತ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡು ಬಳಿಕ ದೇಶದ ಹಲವು ನಗರಗಳಲ್ಲಿ 200 ಕ್ಕೂ ಅಧಿಕ ಸಭೆಗಳನ್ನು ನಡೆಸಿದೆ. ಹಣಕಾಸು, ವಿದೇಶಾಂಗ, ಪರಿಸರ ಇಲಾಖೆ ಸಚಿವರ ಸಭೆಗಳು ಇದರಲ್ಲಿವೆ. ಈ ಎಲ್ಲ ಸಭೆಗಳಲ್ಲಿ ಹಲವಾರು ಘೋಷಣೆಗಳನ್ನು ಮಾಡಲಾಗಿದೆ. ಅದೆಲ್ಲದಕ್ಕೂ ಇಂದಿನಿಂದ ಆರಂಭವಾಗಿರುವ ವಿಶ್ವನಾಯಕರ ಜಿ20 ಶೃಂಗಸಭೆಯಲ್ಲಿ ಅಂತಿಮ ಮುದ್ರೆ ಬಿದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!