ಜನವರಿ 22 ರಂದು ಆಯೋಧ್ಯೆ ರಾಮ ಮಂದಿರ ಉದ್ಘಾಟನೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಯೋಧ್ಯೆ ರಾಮ ಮಂದಿರವನ್ನು 2024ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ. ಈ ಮೂಲಕ ನಾಲ್ಕೇ ತಿಂಗಳಲ್ಲಿ ಆಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ.

ನಿರ್ಮಾಣ ಜವಾಬ್ದಾರಿ ಹೊತ್ತಿರುವ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಇತ್ತೀಚೆಗೆ ರಾಮ ಮಂದಿರ ಉದ್ಘಾಟನೆ ಕುರಿತು ಮಾಹಿತಿ ನೀಡಿದ್ದರು. ಜ.14ರ ಮಕರ ಸಂಕ್ರಾಂತಿ ದಿನದಂದು ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪಿಸಲಾಗುವುದು ಎಂದಿದ್ದರು. ಇದೇ ವೇಳೆ ಜನವರಿ ಕೊನೆಯ ವಾರದಲ್ಲಿ ಮಂದಿರ ಉದ್ಘಾಟನೆ ಮಾಡಲಾಗುವುದು ಎಂದಿದ್ದರು. ಇದೀಗ ಶ್ರೀ ರಾಮ ಮಂದಿರ ಉದ್ಘಾಟನೆ ದಿನಾಂಕ ಘೋಷಣೆಯಾಗಿದೆ. ಜನವರಿ 22 ರಂದು ಭವಿ ರಾಮ ಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.

ಈಗಾಗಲೇ ಮೂರು ಅಂತಸ್ತಿನ ದೇವಾಲಯದ ನೆಲಮಹಡಿ ನಿರ್ಮಾಣ ಪೂರ್ಣಗೊಂಡಿದೆ. ರಾಮಲಲ್ಲಾ ವಿಗ್ರಹ ಸ್ಥಾಪನೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಾಗಿದೆ. ಈ ಸಮಾರಂಭಕ್ಕೆ ಸುಮಾರು 10,000 ಅತಿಥಿಗಳಿಗೆ ಮಂಡಳಿಯು ಆಮಂತ್ರಣ ನೀಡಿದೆ. ಈಗಾಗಲೇ ಐತಿಹಾಸಿಕ ಸಮಾರಂಭದ ಸಿದ್ಧತೆಗಾಗಿ ಮಂದಿರಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 22 ಕೋಟಿ ರು. ಮೌಲ್ಯದ ಗಿಡಗಳು ಮತ್ತು ಹೂಬಿಡುವ ಮತ್ತು ಅಲಂಕಾರಿಕ ಸಸ್ಯಗಳನ್ನು ನಡೆಲಾಗಿದೆ. ಈ ರಾಮ ಪಥ, ಧರ್ಮ ಪಥ ಮತ್ತು ಭಕ್ತಿ ಪಥಗಳ ಸೌಂದರ್ಯ ಹೆಚ್ಚಿಸುವ ಕಾರ್ಯವನ್ನು ಉತ್ತರ ಪ್ರದೇಶದ ರಾಜ್ಯ ಅರಣ್ಯ ಇಲಾಖೆ ವಹಿಸಿಕೊಂಡಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಉದ್ಘಾಟನೆಗೆ ಶ್ರೀರಾಮನ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ರಾಮಮಂದಿರವನ್ನು ನೋಡಲು ಅಸಂಖ್ಯಾತ ಭಕ್ತರು ಬರುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!