ನ್ಯೂಜಿಲೆಂಡ್ ಗೆ ಐತಿಹಾಸಿಕ ಸರಣಿ: ಭಾರತದಲ್ಲಿ ವೈಟ್ ವಾಶ್ ಮಾಡಿದ ಮೊದಲ ತಂಡ ಹೆಗ್ಗಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವಿರುದ್ಧ 3ನೇ ಟೆಸ್ಟ್ ಪಂದ್ಯವನ್ನೂ ಕೂಡನ್ಯೂಜಿಲೆಂಡ್ ತಂಡ ಗೆದ್ದ ಸಂಭ್ರಮಿಸಿದ್ದು, ಈ ಮೂಲಕ ಭಾರತದಲ್ಲಿ ವೈಟ್ ವಾಶ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು 25ರನ್ ಗಳ ಅಂತರದಲ್ಲಿ ಮಣಿಸುವ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಬೀಗಿತು.

ಆ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ತಂಡದ ವಿರುದ್ಧ ಭಾರತದಲ್ಲೇ ವೈಟ್ ವಾಶ್ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ನ್ಯೂಜಿಲೆಂಡ್ ಭಾಜನವಾಗಿದೆ.

ನ್ಯೂಜಿಲೆಂಡ್ ತಂಡ ತವರು ಅಥವಾ ವಿದೇಶದಲ್ಲಿ ಮೂರು ಟೆಸ್ಟ್‌ಗಳನ್ನು ಗೆದ್ದ ಮೊದಲ ನಿದರ್ಶನ ಇದಾಗಿದ್ದು, ಮಾತ್ರವಲ್ಲದೇ ಸತತ ಮೂರು ವಿದೇಶಿ ಟೆಸ್ಟ್‌ಗಳನ್ನು ಗೆದ್ದ ಮೊದಲ ತಂಡ ಕೂಡ ಇದಾಗಿದೆ.

ಹೀನಾಯ ಸೋಲು:

ನ್ಯೂಜಿಲೆಂಡ್ ನೀಡಿದ್ದ 147 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಭಾರತ ತನ್ನ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 121ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 25 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!