ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಲಾಲ್‌ಬಾಗ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಶಾಕ್ ನೀಡುವ ವಿಚಾರ. ಅದೇನೆಂದರೆ ತೋಟಗಾರಿಕಾ ಇಲಾಖೆ ಪ್ರವೇಶ ದರವನ್ನು ಭಾರೀ ಏರಿಕೆ ಮಾಡಿದೆ.
12 ವರ್ಷ ಮೇಲ್ಪಟ್ಟವರಿಗೆ ಮೊದಲು 30 ರೂ. ಇತ್ತು. ಈಗ ಈ ದರವನ್ನು 50 ರೂ.ಗೆ ಏರಿಕೆ ಮಾಡಿದೆ.
6 ರಿಂದ 12 ವರ್ಷದೊಳಗಿನ ಮಕ್ಕಳ ಪ್ರವೇಶ ಶುಲ್ಕ ಮೊದಲು 10 ರೂ. ಇತ್ತು. ಈಗ ಇದು 20 ರೂ.ಗೆ ಏರಿಕೆ ಮಾಡಲಾಗಿದೆ. ಕಳೆದ ವಾರದಿಂದ ಪ್ರವೇಶ ಶುಲ್ಕ ದರವನ್ನು ತೋಟಗಾರಿಗೆ ಇಲಾಖೆ ಏರಿಕೆ ಮಾಡಿದೆ.
12 ವರ್ಷ ಮೇಲ್ಪಟ್ಟವರಿಗೆ 2020ರವರೆಗೆ 25 ರೂ. ಶುಲ್ಕ ವಿಧಿಸಲಾಗಿತ್ತು. 2021ರ ಫೆಬ್ರವರಿ ಬಳಿಕ 5 ರೂ. ಏರಿಕೆ ಮಾಡಿ 30 ರೂ. ಶುಲ್ಕವನ್ನು ನಿಗದಿ ಮಾಡಲಾಗಿತ್ತು.