June 26, 2026
Friday, June 26, 2026
spot_img

‘ಇತಿಹಾಸ ಬದಲಾಗಿದೆ, ಆದ್ರೆ ವಿಜಯ್ ಬದಲಾಗಿಲ್ಲ’: ತಮಿಳುನಾಡು ಸಿಎಂ ಬಗ್ಗೆ ರಮ್ಯಾ ಭಾವುಕ ಪೋಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ (Vijay) ಅವರನ್ನು ಖ್ಯಾತ ನಟಿ ಹಾಗೂ ನಿರೂಪಕಿ (VJ) ರಮ್ಯಾ ಸುಬ್ರಮಣಿಯನ್ ಅವರು ಭೇಟಿಯಾಗಿದ್ದಾರೆ. ಈ ವಿಶೇಷ ಭೇಟಿಯ ಸುಂದರ ಫೋಟೋವನ್ನು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ. ಇದೇ ವೇಳೆ ಸಿಎಂ ವಿಜಯ್ ಅವರಿಗೆ ತಡವಾಗಿ ಜನ್ಮದಿನದ ಶುಭಾಶಯ ಕೋರಿ ಸುದೀರ್ಘ ಪೋಸ್ಟ್ ಒಂದನ್ನು ಬರೆದುಕೊಂಡಿದ್ದಾರೆ.

ಮುಖ್ಯಮಂತ್ರಿಯಾದ್ರೂ ಬದಲಾಗಿಲ್ಲ ವಿಜಯ್ ಗುಣ!

ವಿಜಯ್ ಅವರ ಸರಳತೆಯನ್ನು ಕೊಂಡಾಡಿರುವ ರಮ್ಯಾ, “ಆರು ತಿಂಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಅವರ ಕೊನೆಯ ಸಿನಿಮಾದ ಕಾರ್ಯಕ್ರಮವನ್ನು ನಾನು ನಿರೂಪಣೆ ಮಾಡಿದ್ದೆ. ನಿನ್ನೆ ಸಂಜೆ ನಾನು ನಮ್ಮ ಸಿಎಂ ಅವರನ್ನು ಭೇಟಿಯಾದೆ. ಕಾಲ ಬದಲಾಗಿದೆ, ಅವರ ಬಿರುದುಗಳು ಬದಲಾಗಿವೆ ಮತ್ತು ಇತಿಹಾಸವೇ ಬದಲಾಗಿದೆ. ಆದರೆ ವಿಜಯ್ ಮಾತ್ರ ಹಾಗೇ ಇದ್ದಾರೆ, ಕಿಂಚಿತ್ತೂ ಬದಲಾಗಿಲ್ಲ. ಬಹುಶಃ ಇದೇ ಅವರ ಅತಿ ದೊಡ್ಡ ಶಕ್ತಿ” ಎಂದು ಹೊಗಳಿದ್ದಾರೆ.

ಗೌರವ ನೀಡುವ ಗುಣವೇ ಅವರ ಸ್ಟಾರ್‌ಡಮ್

ಕಳೆದ ಎರಡು ದಶಕಗಳಿಂದ ವಿಜಯ್ ಅವರನ್ನು ಹತ್ತಿರದಿಂದ ನೋಡಿರುವುದಾಗಿ ಹೇಳಿರುವ ರಮ್ಯಾ, “ಅವರು ಎಲ್ಲರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ. ಅದಕ್ಕೆ ಕೇವಲ ಅವರ ಸ್ಟಾರ್‌ಡಮ್ ಕಾರಣವಲ್ಲ. ಅವರು ಯಾವುದೇ ಕಾರ್ಯಕ್ರಮದಲ್ಲಿದ್ದರೂ ಎದುರಿಗಿರುವವರಿಗೆ ಅತಿ ಹೆಚ್ಚು ಗೌರವ ನೀಡುತ್ತಾರೆ” ಎಂದು ವಿಜಯ್ ಅವರ ಘನತೆಯನ್ನು ಶ್ಲಾಘಿಸಿದ್ದಾರೆ. ಸದ್ಯ ಈ ಪೋಸ್ಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !