ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಬದಿಯಲ್ಲಿ ಆರಾಮಾಗಿ ನಿಂತಿದ್ದವರ ಮೇಲೆಯೇ ಯಮನಂತೆ ಕಾರು ನುಗ್ಗಿಸಿದರೆ ಏನಾಗಬೇಡ ಹೇಳಿ? ದೆಹಲಿ ಪಕ್ಕದ ಗ್ರೇಟರ್ ನೋಯ್ಡಾದಲ್ಲಿ ಇಂತಹುದೇ ಒಂದು ಎದೆ ಝಲ್ಲೆನಿಸುವ ಘಟನೆ ನಡೆದಿದೆ. ಕುಡಿದ ಮತ್ತೋ ಅಥವಾ ವೇಗದ ಹುಚ್ಚೋ ಗೊತ್ತಿಲ್ಲ, ಕಣ್ಣುಮುಚ್ಚಿ ಬಂದ ಕಾರೊಂದು ರಸ್ತೆಯಲ್ಲಿದ್ದ ನಾಲ್ವರಿಗೆ ಜೋರಾಗಿ ಗುದ್ದಿದೆ. ಅಷ್ಟೇ ಅಲ್ಲ, ಆಕ್ಸಿಡೆಂಟ್ ಆದ ತಕ್ಷಣ ಡ್ರೈವರ್ ಕಾರನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಇಡೀ ಘಟನೆಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಇದೀಗ ಜನರ ಆಕ್ರೋಶ ಕಾರಣವಾಗಿದೆ.
ಬೇಜವಾಬ್ದಾರಿಯ ಪರಮಾವಧಿ
ಸೆ. 18 ರಂದು ನಾಲೆಡ್ಜ್ ಪಾರ್ಕ್ ಪೊಲೀಸ್ ಸ್ಟೇಷನ್ ಲಿಮಿಟ್ಸ್‌ನಲ್ಲಿ ಈ ಘಟನೆ ನಡೆದಿದೆ. ಸಿಕ್ಕಾಪಟ್ಟೆ ಸ್ಪೀಡ್ ಆಗಿ ಬಂದ ಕಾರೊಂದು ರಸ್ತೆಯಲ್ಲಿ ನಡೆದುಕೊಂಡು ಹೂಗುತ್ತಿದ್ದ ನಾಲ್ಕು ಜನರಿಗೆ ಡಿಕ್ಕಿ ಹೊಡೆಸಿದ್ದಾನೆ. ಅದೃಷ್ಟ ಚೆನ್ನಾಗಿತ್ತು ಅಂತ ಕಾಣಿಸುತ್ತೆ, ಕಾರು ಗುದ್ದಿದವರಲ್ಲಿ ಒಬ್ಬರಿಗೆ ಕಾಲಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ನೋಡಿ ಕಳ್ಳನನ್ನ ಹಿಡಿದ ಪೊಲೀಸರು
ಜನರು ಕೊಟ್ಟ ದೂರಿನ ಆಧಾರದ ಮೇಲೆ ನಾಲೆಡ್ಜ್ ಪಾರ್ಕ್ ಪೊಲೀಸರು ಕೇಸ್ ದಾಖಲಿಸಿಕೊಂಡು, ಆ ಕಾರು ಮತ್ತು ಡ್ರೈವರ್‌ನ ಪತ್ತೆ ಹಚ್ಚೋಕೆ ಸ್ಪೆಷಲ್ ಟೀಮ್ ರೆಡಿ ಮಾಡಿದ್ರು. ಕೊನೆಗೂ ಸಿಸಿಟಿವಿ ದೃಶ್ಯಗಳನ್ನ ಬೆನ್ನಟ್ಟಿದ ಪೊಲೀಸರು ಅಪಘಾತ ಮಾಡಿದ ಕಾರನ್ನ ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲ, ಗೌತಮ್ ಬುದ್ಧ ನಗರದ ಲಾಡ್‌ಪುರ ನಿವಾಸಿಯಾದ ಮನೀಶ್ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.



