ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಚ್‌ಐವಿ ಸೋಂಕು ಕಂಡುಹಿಡಿದಿದ್ದಕ್ಕೆ ನೊಬೆಲ್ ಪ್ರಶಸ್ತಿ ಪಡೆದಿದ್ದ ಸಂಶೋಧಕ, ವಿಜ್ಞಾನಿ ಲೂಕ್ ಮೊಂಟಾಗ್ನಿಯರ್ ನಿಧನರಾಗಿದ್ದಾರೆ. ಪ್ಯಾರಿಸ್‌ನ ಪಶ್ಚಿಮ ಉಪನಗರ ನ್ಯೂಲ್ಲಿ ಸುರ್ ಸೈನ್‌ನಲ್ಲಿರುವ ಅಮೆರಿಕನ್ ಹಾಸ್ಪಿಟಲ್ ಆಫ್ ಪ್ಯಾರಿಸ್‌ನಲ್ಲಿ ಲೂಕ್ ಕೊನೆಯುಸಿರೆಳೆದಿದ್ದಾರೆ.
1923 ರಲ್ಲಿ ಮಧ್ಯ ಫ್ರಾನ್ಸ್‌ನ ಚಾಬ್ರಿಸ್‌ನಲ್ಲಿ ಜನಿಸಿದ ಲೂಕ್ ವೈರಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 1983 ರಲ್ಲಿ ಏಡ್ಸ್‌ಗೆ ಕಾರಣವಾಗುವ ಹ್ಯೂಮನ್ ಇಮ್ಯುನೋ ಡಿಫಿಶಿಯನ್ಸಿ ವೈರಸ್( ಎಚ್‌ಐವಿ)ನ್ನು ಗುರುತಿಸಿದ ತಂಡವನ್ನು ಇವರು ಮುನ್ನಡೆಸಿದ್ದರು. ಈ ಮೂಲಕ 2008 ರಲ್ಲಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲೂಕ್ ಅವರನ್ನು ಹುಡುಕಿಬಂದಿತ್ತು. ತಮ್ಮ ಸಹೋದ್ಯೋಗಿ ಫ್ರಾಂಕೋಯಿಸ್ ಬ್ಯಾರೆ ಸಿನೋಸ್ಸಿ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದರು.
ಲೂಕ್ ಪೊಯಿಟಿಯರ‍್ಸ್ ಹಾಘೂ ಪ್ಯಾರಿಸ್‌ನಲ್ಲಿ ವೈದ್ಯಕೀಯ ಅಧ್ಯಯನ ನಡೆಸಿದ್ದಾರೆ. 1983 ರಲ್ಲಿ ಪಾಶ್ಚರ್ ಇನ್ಸ್‌ಟಿಟ್ಯೂಟ್‌ನಲ್ಲಿ ಇವರ ನೇತೃತ್ವದ ತಂಡ ವೈರಸ್‌ನ್ನು ಪ್ರತ್ಯೇಕಿಸಿದ್ದು, ನಂತರ ಅದಕ್ಕೆ ಎಚ್‌ಐವಿ ಎಂದು ಕರೆಯಲಾಯಿತು.