ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್ ಕಮಾಂಡರ್’ಗೆ ಸೇರಿದ ಕಟ್ಟಡ ನೆಲಸಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಕಾಶ್ಮೀರದ ಅನಂತನಾಗ್ ನ ಪಹಲ್ಗಾಮ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಅಮೀರ್ ಖಾನ್ಗೆ ಸೇರಿದ ಮಾಳಿಗೆಯ ಕಟ್ಟಡವನ್ನು ನಾಗರಿಕ ಆಡಳಿತ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

ಪಹಲ್ಗಾಮ್ ನ ಲೆವಾರ್ ಗ್ರಾಮದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಅಮೀರ್ ಖಾನ್ಗೆ ಸೇರಿದ ಒಂದು ಅಂತಸ್ತಿನ ಕಟ್ಟಡವಿದ್ದು, ಈ ಕಟ್ಟಡವನ್ನು ಇಂದು ಬೆಳಗಿನ ಜಾವ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ .

ಜಮ್ಮು ಮತ್ತು ಕಾಶ್ಮೀರ ಆಡಳಿತದ ಜಂಟಿ ಕಾರ್ಯಾಚರಣೆ ತಂಡವುಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಕಟ್ಟಡ ನೆಲಸಮ ಕಾರ್ಯಾಚರಣೆ ನಡೆಸಲಾಯಿತು. ಸರ್ಕಾರಿ ಭೂಮಿಯನ್ನು ಅತಿಕ್ರಣ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗಿತ್ತು.

ಕಣಿವೆ ರಾಜ್ಯವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಮತ್ತು ಸರ್ಕಾರದ ಮೇಲೆ ಜನರಿಗೆ ನಂಬಿಕೆ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!