April 11, 2026
Saturday, April 11, 2026
spot_img

ALERT 🚨| ನಾಳೆಯಿಂದ ಆರಂಭವಾಗಲಿದೆ ಹೋಲಾಷ್ಟಕ, ಈ ಎಂಟು ದಿನ ಮಕ್ಕಳ ಮೇಲೆ ತೀವ್ರ ನಿಗಾ ಇರಲಿ

ನಾಳೆಯಿಂದ ಹೋಲಾಷ್ಟಕ ಆರಂಭವಾಗಲಿದೆ. ಹೋಳಿ ಹಬ್ಬದ ಹಿಂದಿನ ಎಂಟು ದಿನವನ್ನು ಹೋಲಾಷ್ಟಕ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮಕ್ಕಳ ಮೇಲೆ ತೀವ್ರ ನಿಗಾ ಇಡುವುದು ಮುಖ್ಯವಾಗಿದೆ.

ಈ ಅವಧಿಯನ್ನು ಹಿಂದೂ ಧರ್ಮದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಯಾವುದೇ ಶುಭ ಕಾರ್ಯವನ್ನು ನಡೆಸುವುದಿಲ್ಲ. ಪುರಾಣಗಳ ಪ್ರಕಾರ ಎಂಟು ದಿನಗಳ ಕಾಲ ಪ್ರಲ್ಹಾದನಿಗೆ ಕಷ್ಟಗಳು ಬಂದಿದ್ದವು. ಈ ದಿನಗಳು ಅಶುಭ ಎನ್ನಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ಹೆಚ್ಚು ನಂಬಲಾಗುತ್ತದೆ.

ಈ ಸಮಯದಲ್ಲಿ ಮಾಟ ಮಂತ್ರ ಹೆಚ್ಚಾಗಿ ಮಾಡಲಾಗುತ್ತದೆ. ಮಕ್ಕಳಿಗೆ ಬೇಗ ದೃಷ್ಠಿ ತಗುಲುತ್ತದೆ. ಹೀಗಾಗಿ ಮಕ್ಕಳಿಗೆ ಸಂಬಂಧಿಸಿ ಈ ಕೆಲಸಗಳನ್ನು ಮಾಡಬೇಡಿ..

ಮಕ್ಕಳ ಬಟ್ಟೆಯನ್ನು ಸಂಜೆಯ ಒಳಗೆ ಮನೆಯೊಳಗೆ ತನ್ನಿ. ರಾತ್ರಿಯಿಡೀ ಹೊರಕ್ಕೆ ಇಡಬೇಡಿ.

ಮಕ್ಕಳನ್ನು ಹೊರಕ್ಕೆ ಆಟವಾಡಲು ಕಳಿಸಬೇಡಿ. ಅದರಲ್ಲಿಯೂ ಸಂಜೆಯಲ್ಲಿ ಮಕ್ಕಳು ಮನೆಯಲ್ಲಿಯೇ ಇರಲಿ.

ಮಕ್ಕಳಿಗೆ ಅಪರಿಚಿತರಿಂದ ಏನನ್ನೂ ಪಡೆಯಬಾರದು ಎಂದು ಹೇಳಿಕೊಡಿ. ಅದರಲ್ಲಿಯು ಬಿಳಿ ಬಣ್ಣದ ಪದಾರ್ಥ ಮುಟ್ಟದಂತೆ ಸೂಚಿಸಿ.

ಹೊಟ್ಟೆಯೊಳಗೆ ಇರುವ ಮಕ್ಕಳಿಗೂ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಈ ಎಲ್ಲ ನಿಯಮಗಳು ಗರ್ಭಿಣಿಯರಿಗೂ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !