ಹೋಂಗಾರ್ಡ್ ಕಮಾಂಡೆಂಟ್ ಸಂತೋಷ ಕುಮಾರ್ ಪಾಟೀಲ್ ಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೃಹ ರಕ್ಷಕ‌ ದಳದ ( ಹೋಂಗಾಡ್೯) ಕಲಬುರಗಿ ಜಿಲ್ಲಾ ಸಮಾದೇಷ್ಠರಾದ ಸಂತೋಷಕುಮಾರ ಪಾಟೀಲ್ ಅವರಿಗೆ ಶುಕ್ರವಾರ 2022ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಪಾಟೀಲ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಿದರು.‌

ಗೃಹ ರಕ್ಷಕ ಮತ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಟ್ಟಾರೆ 17 ಅಧಿಕಾರಿ-ಸಿಬ್ಬಂದಿಯವರಿಗೆ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದು, ಅವರಲ್ಲಿ ಸಂತೋಷಕುಮಾರ ಪಾಟೀಲ ಅವರು ಒಬ್ಬರಾಗಿದ್ದಾರೆ. ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಚಿನ್ನದ‌ ಪದಕ ಪ್ರಕಟಿಸಲಾಗಿತ್ತು.

ಕಳೆದ ಐದು ವರ್ಷಗಳಿಂದ ಗೃಹ ರಕ್ಷಕ ದಳದ ಕಲಬುರಗಿ ಜಿಲ್ಲಾ ಸಮಾದೇಷ್ಟ (ಹೋಂಗಾಡ್೯ ಕಮಾಂಡೆಂಟ್) ರಾಗಿ ಸೇವೆ ಸಲ್ಲಿಸುತ್ತಿರುವ ಸಂತೋಷಕುಮಾರ ಪಾಟೀಲ್ ಅವರು ಕೊರೋನಾ ವೇಳೆಯಲ್ಲಿ ಅಮೋಘ ಸೇವೆ, ಹೋಂಗಾಡ್೯ ಸೇವೆ ಬಲಪಡಿಸಿರುವುದು ಜೊತೆಗೇ ಹೋಂಗಾಡ್೯ ಸಂಖ್ಯೆ ಹೆಚ್ಚಿಸಿರುವುದರಿಂದ ಸರ್ಕಾರ ಅವರ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಗಳ ಚಿನ್ನದ ಪದಕ ಗೌರವ ನೀಡಿ ಗೌರವಿಸಿದೆ.

ಚಿನ್ನದ ಪದಕ ಪ್ರೇರಣೆ ಹೆಚ್ಚಿಸಿದೆ

ಗೃಹ ರಕ್ಷಕ ದಳದ ಸೇವೆ ಬಲಪಡಿಸಲು ಪ್ರಮಾಣಿಕ ಸೇವೆ ಹಾಗೂ ಸೇವಾ ಕಾರ್ಯ ವಿಸ್ತರಿಸಲು ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತಷ್ಟು ಪ್ರೇರಣೆ ನೀಡಿದೆ ಎಂದು‌ ಸಂತೋಷ ಕುಮಾರ ಪಾಟೀಲ್ ಹರ್ಷದಿಂದ‌ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!