HEALTH | ಅತಿಸಾರಕ್ಕೆ ಮನೆ ಮದ್ದುಗಳಿವು..

ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಯಾದಾಗ ಅತಿಹಾಸ ಎದುರಾಗುತ್ತದೆ. ಸಡಿಲವಾದ, ನೀರಿನಂಶದ ಮಲ ವಿಸರ್ಜನೆಯಿಂದ ದೇಹದಲ್ಲಿನ ನೀರಿನಾಂಶ ಹೊರಬರುತ್ತದೆ. ಬೇಧಿ ದಿನ ಅಥವಾ ಗಂಟೆಗಟ್ಟಲೆಯೂ ಇರಬಹುದು, ದೇಹದಲ್ಲಿ ನೀರು ಇಲ್ಲದೆ ಸುಸ್ತು ಕಾಣಿಸುತ್ತದೆ. ಸಮಸ್ಯೆ ಗಂಭೀರವಾಗಿದೆ ಎನಿಸಿದರೆ ಮನೆ ಮದ್ದುಗಳನ್ನು ಪಾಲಿಸದೇ ವೈದ್ಯರನ್ನು ಕಾಣಬೇಕು..

ಚೆನ್ನಾಗಿ ನೀರು ಕುಡಿಯಿರಿ
ದೇಹದಿಂದ ನೀರಿನ ಅಂಶ ಹೊರಹೋಗುವ ಕಾರಣ ನಿಮಗೆ ನೀರಿನ ಅತಿ ಅವಶ್ಯಕತೆ ಇರುತ್ತದೆ. ಹಾಗಾಗಿ ಅತೀ ಹೆಚ್ಚು ನೀರು ಕುಡಿಯಿರಿ. ಈ ಸಮಯದಲ್ಲಿ ದೇಹಕ್ಕೆ ಪೊಟ್ಯಾಶಿಯಮ್ ಹಾಗೂ ಸೋಡಿಯಂ ಅಗತ್ಯವಿದೆ. ನೀರು ಅಥವಾ ಫ್ರೂಟ್ ಜ್ಯೂಸ್ ಕುಡಿಯಿರಿ.

ಈ ಸಮಯದಲ್ಲಿ ಕಾಫಿ, ಟೀ, ಕಾರ್ಬೋನೇಟೆಡ್ ಪಾನೀಯ, ಅತೀ ಬಿಸಿಯಾದ ಪಾನೀಯ ಹಾಗೂ ಮದ್ಯಪಾನ ಬೇಡ.

ಊಟದ ಬಗ್ಗೆ ಗಮನ ಇರಲಿ
ಈ ಸಮಯದಲ್ಲಿ ಹಣ್ಣು, ಪೊಟ್ಯಾಶಿಯಂ ಇರುವ ಆಲೂಗಡ್ಡೆ ಅಥವಾ ಗೆಣಸು ತಿನ್ನಬಹುದು. ಇನ್ನು ಎಲೆಕ್ಟ್ರೋಲೈಟ್ ಹೊಂದಿರುವ ಸೂಪ್, ಮೆತ್ತನೆಯ ತರಕಾರಿ ತಿನ್ನಬಹುದು.

ಈ ಆಹಾರ ಸೇವನೆ ಬೇಡ
ಹೆಚ್ಚು ಫ್ಯಾಟ್ ಇರುವ, ಎಣ್ಣೆಯಲ್ಲಿ ಕರಿದ ಪದಾರ್ಥ, ಖಾರದ ಐಟಮ್ಸ್, ಆರ್ಟಿಫಿಶಿಯಲ್ ಸಿಹಿ ಇರುವ ಪದಾರ್ಥಗಳ ಸೇವನೆ ಬೇಡ

ವೈದ್ಯರನ್ನು ಕಾಣುವುದು ಯಾವಾಗ?

  • ಬೇಧಿಯಲ್ಲಿ ರಕ್ತ ಅಥವಾ ಕೀವು ಕಾಣಿಸಿದರೆ
  • ಜ್ವರ ಬಂದರೆ
  • ಬಾಯಿ ಒಣಗುವುದು, ಅತಿಯಾಗಿ ನಿರ್ಜಲೀಕರಣ ಆದರೆ
  • ನಿದ್ದೆಯಲ್ಲಿಯೂ ಬೇಧಿಯಾದರೆ
  • ಇದ್ದಕ್ಕಿದ್ದಂತೆಯೇ ತೂಕ ಇಳಿಕೆಯಾದರೆ
  • ಹೊಟ್ಟೆ ನೋವು ಇದ್ದರೆ

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!