April 13, 2026
Monday, April 13, 2026
spot_img

Home Remedy | ಶೀತ ಆಗಿ ಕಫ ಕಟ್ಟಿಕೊಂಡಿದ್ಯಾ? ನೋ ಟೆನ್ಶನ್ ಇಲ್ಲಿದೆ ಮನೆಮದ್ದು, ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹವಾಮಾನ ಬದಲಾದ ಕೂಡಲೇ ಹಲವರಿಗೆ ಶೀತ, ಗಂಟಲು ನೋವು ಮತ್ತು ಕಫ ಕಟ್ಟಿಕೊಳ್ಳುವ ಸಮಸ್ಯೆ ಶುರುವಾಗುತ್ತದೆ. ವಿಶೇಷವಾಗಿ ರಾತ್ರಿ ವೇಳೆ ಕೆಮ್ಮು ಹೆಚ್ಚಾಗಿ ನಿದ್ದೆಯನ್ನೇ ಕದಡುತ್ತದೆ. ಇಂತಹ ಸಮಯದಲ್ಲಿ ಅತಿಯಾಗಿ ಟೆನ್ಶನ್ ತೆಗೆದುಕೊಳ್ಳದೇ, ಮನೆಯಲ್ಲೇ ಸಿಗುವ ಕೆಲವು ಸರಳ ಪದಾರ್ಥಗಳಿಂದ ತಕ್ಷಣದ ಆರಾಮ ಪಡೆಯಬಹುದು.

ಅದರಲ್ಲೂ ಅತ್ಯಂತ ಸುಲಭವಾದ ಮನೆಮದ್ದು ಎಂದರೆ ಶುಂಠಿ-ತುಳಸಿ ಕಷಾಯ. ಒಂದು ಗ್ಲಾಸ್ ನೀರಿಗೆ 4–5 ತುಳಸಿ ಎಲೆಗಳು, ಚಿಕ್ಕ ತುಂಡು ಶುಂಠಿ, ಎರಡು ಮೆಣಸು ಕಾಳು ಮತ್ತು ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಅರ್ಧಕ್ಕೆ ಇಳಿದ ಬಳಿಕ ಅದನ್ನು ಬಿಸಿ ಬಿಸಿ ಕುಡಿಯಿರಿ. ಇದು ಗಂಟಲಿನ ಕಫವನ್ನು ಸಡಿಲಗೊಳಿಸಿ ಕೆಮ್ಮನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

ಮತ್ತೊಂದು ಉತ್ತಮ ವಿಧಾನವೆಂದರೆ ಅರಿಶಿಣ ಹಾಲು. ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಬಿಸಿ ಹಾಲಿಗೆ ಅರ್ಧ ಚಮಚ ಅರಿಶಿಣ ಹಾಕಿ ಕುಡಿದರೆ ಗಂಟಲು ಉರಿ ಮತ್ತು ಶೀತದ ತೀವ್ರತೆ ಕಡಿಮೆಯಾಗುತ್ತದೆ. ಕಫ ಕಟ್ಟಿಕೊಂಡಿದ್ದರೆ ಬಿಸಿ ನೀರಿನ ಆವಿ ತೆಗೆದುಕೊಳ್ಳುವುದೂ ಬಹಳ ಉಪಯುಕ್ತ.

ಇದರ ಜೊತೆಗೆ ದಿನವಿಡೀ ಬೆಚ್ಚಗಿನ ನೀರು ಕುಡಿಯುವುದು, ತಣ್ಣಗಿನ ಪದಾರ್ಥಗಳನ್ನು ತಪ್ಪಿಸುವುದು ಮುಖ್ಯ. ಸಾಮಾನ್ಯ ಶೀತ ಮತ್ತು ಕಫಕ್ಕೆ ಈ ಮನೆಮದ್ದುಗಳು ಬೇಗನೆ ಆರಾಮ ನೀಡುತ್ತವೆ. ಎರಡು ದಿನಗಳಿಗೂ ಹೆಚ್ಚು ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !