ಹೊಸದಿಗಂತ ಹುಬ್ಬಳ್ಳಿ:
ಶತ್ರುಗಳ ನಾಶಕ್ಕೆ ಹೋಮ ಮಾಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಕಾಂಗ್ರೆಸ್‌ನಲ್ಲಿ ಶತ್ರಗಳಿದ್ದಾರ? ಮುಖ್ಯಮಂತ್ರಿ ಸಿದ್ದರಾಮಯ್ಯನಾ, ಗೃಹ ಸಚಿವ ಜಿ. ಪರಮೇಶ್ವರ ಅಥವಾ ಯಾರೂ ನಿಮಗೆ ಶತ್ರುಗಳಿದ್ದಾರೆ ಎಂದು ಸ್ಪಷ್ಟ ಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ ಅವರು, ಶತ್ರಗಳ ನಾಶಕ್ಕೆ ಹೋಮ ಮಾಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ರಾಜಕಾರಣದಲ್ಲಿ ನನ್ನ ಪ್ರಕಾರ ಶತ್ರುಗಳು ಇಲ್ಲ. ರಾಜಕಾರಣದಲ್ಲಿ ಪ್ರತಿಸ್ಪರ್ದಿಗಳು ಮಾತ್ರ ಇರುತ್ತಾರೆ. ನಾನು ಹಾಗೂ ಬಿಜೆಪಿ ಯಾರನ್ನು ಶತ್ರುಗಳು ಎಂದು ಭಾವಿಸಿಲ್ಲ ಎಂದರು.
ಶತ್ರುತ್ವ ಹಾಗೂ ಶತ್ರುಗಳು ಇರಬಾರದು ಎಂದು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಕಲಿಸಿದ್ದಾರೆ. ಪ್ರಜಾಪ್ರಭುತ್ವ ಇರುವ ದೇಶಗಳಲ್ಲಿ ಪ್ರತಿಸ್ಪರ್ದಿಗಳು ಇರುತ್ತಾರೆ. ಡಿ.ಕೆ.ಶಿವಕುಮಾರ ಅವರಿಗೆ ಶತ್ರುಗಳು ಯಾರಿದ್ದಾರೆ ಎಂಬುದಕ್ಕೆ ಉತ್ತರ ನೀಡಬೇಕು ಎಂದ ಹೇಳಿದರು.