ಹೊಸದಿಗಂತ ಹುಬ್ಬಳ್ಳಿ:
ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿದ್ದ ಆಂತರಿಕ ಜಗಳ ಈಗ ಬಹಿರಂಗಗೊಳ್ಳುತ್ತಿದ್ದು, ಇದರಿಂದ ಯಾವುದೇ ಕ್ಷಣದಲ್ಲಿಯೂ ಕಾಂಗ್ರೆಸ್ ಸರ್ಕಾರ ಪತನವಾಗಬಹುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಈ ಬಗ್ಗೆ ಅನೇಕ ಬಾರಿ ಮಾತನಾಡಿದ್ದೇನೆ. ಈಗಾಗಲೇ ಎಸ್‌ಸಿ, ಎಸ್‌ಟಿ ನಾಯಕರು ಔತನಕೂಟ ಏರ್ಪಡಿಸುವುದು ಹಾಗೂ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಕೈಗಾರಿಕ ಸಚಿವ ಎಂ.ಬಿ. ಪಾಟೀಲ ಹೇಳಿಕೆ ನೋಡಿದರೆ ಕಾಂಗ್ರೆಸ್‌ನಲ್ಲಿ ಸಿಎಂ ಹಾಗೂ ಡಿಸಿಎಂ ಗುಂಪು ಇರುವುದು ಬಹಿರಂಗವಾಗುತ್ತಿವೆ ಎಂದರು.
ಕೆ.ಎನ್. ರಾಜಣ್ಣ ಅವರು ಎಸ್‌ಸಿ, ಎಸ್‌ಟಿ ಸಮುದಾಯ ನಾಯಕರು ಸಮಸ್ಯೆಗಳ ಪರಿಹರಿಸುವ ಬಗ್ಗೆ ಏಕೆ ಸೇರಬಾರದ ಎಂದು ಪ್ರಶ್ನಿಸಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಚರ್ಚೆಗೆ ಕ್ಯಾಬಿನೇಟ್ ಇದೆ. ಸರ್ಕಾರ ಸ್ಪಷ್ಟ ಬಹುಮತ ಪಡೆದಿದ್ದು, ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಸರಿ ಪಡಿಸಿಕೊಳ್ಳಬೇಕು. ಈ ವಿಷಯಕ್ಕೆ ಸೇರುವುದಾಗಿ ಹೇಳುತ್ತಿದ್ದು,ಯಾರು ಇದನ್ನು ನಂಬುತ್ತಾರೆ?. ಕಾಂಗ್ರೆಸ್ ನಾಯಕರಿಗೆ ಎಸ್‌ಸಿ, ಎಸ್‌ಟಿ ಜನಾಂಗದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಅನಿಸುತ್ತಿದ್ದೆ. ಅನುದಾನ ಖರ್ಚಾಗುತ್ತಿಲ್ಲ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಸಚಿವರಾದ ರಾಜಣ್ಣ ಹೇಳುತ್ತಿರುವುದು ನೋಡಿದರೆ ಆಡಳಿತ ಪರಿಸ್ಥತಿ ಹೇಗಿದೆ ಎಂಬುವುದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಚಿವರು ಔತಕೂಟ ಕರೆಯುವುದರಿಂದ ನನ್ನ ವಿರುದ್ಧ ಏನೋ ಷ್ಯಡಂತ್ರ ನಡೆಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಅನಿಸಿದೆ. ಆದ್ದರಿಂದ ತಡೆಯಲು ಅವರು ಶತ್ರು ಸಂಹಾರ ಮಾಡಲು ಹೋಮ ಮಾಡುತ್ತಿದ್ದಾರೆ ಎಂದರು.