ಡಾರ್ಕ್‌ ಸರ್ಕಲ್‌ ನಿಂದ ನಿಮ್ಮ ಸೌಂದರ್ಯ ಕಡಿಮೆ ಆಗಿದ್ಯಾ? ಹಾಗಿದ್ರೆ ಮನೆಯಲ್ಲೇ ಈ ಫೇಸ್‌ ಮಾಸ್ಕ್‌ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಖದ ಕಾಂತಿ ಹೆಚ್ಚಿಸುವಲ್ಲಿ ಕಣ್ಣುಗಳು ಪ್ರಮುಖವಾಗಿದೆ. ಇತ್ತೀಚಿನ ಜೀವನಶೈಲಿಯಿಂದ ನಮ್ಮ ಆಹಾರ, ಸೌಂದರ್ಯದ ಕಡೆ ಹೆಚ್ಚಿನ ಕಾಳಜಿ ವಹಿಸೋಕೆ ಸಾಧ್ಯವಾಗುವುದಿಲ್ಲ. ನಿಮಗೂ ನಿಮ್ಮ  ಬ್ಯುಸಿ ಲೈಫ್‌ ನಲ್ಲಿ ಕಣ್ಣಿನ ಸುತ್ತ ಡಾರ್ಕ್‌ ಸರ್ಕಲ್‌ ಬಂದಿದ್ಯಾ? ಹಾಗಿದ್ರೆ ಮನೆಯಲ್ಲೇ ಈ ಫೇಸ್‌ ಮಾಸ್ಕ್‌ ಗಳನ್ನು ಟ್ರೈ ಮಾಡಿ..

  • ತೆಂಗಿನ ಎಣ್ಣೆ: ಕಣ್ಣಿನ ಸುತ್ತ ಪ್ರತಿದಿನ ರಾತ್ರಿ ತೆಂಗಿನೆಣ್ಣೆ ಹಚ್ಚಿ ಮಲಗುವುದರಿಂದ ಡಾರ್ಕ್‌ ಸರ್ಕಲ್‌ ಕ್ರಮೇಣ ಕಡಿಮೆಯಾಗುತ್ತದೆ.
  • ಆಲೂಗಡ್ಡೆ ರಸ: ಆಲೂಗಡ್ಡೆಯನ್ನು ಬೇಯಿಸಿ ಅವರಲ್ಲಿನ ರಸವನ್ನು ತೆಗೆದು ಕಣ್ಣಿನ ಸುತ್ತ ಹಚ್ಚಿಕೊಳ್ಳಿ.
  • ಬೇಕಿಂಗ್‌ ಸೋಡಾ: ಸೋಡಾ ಹಾಗೂ ಹಾಲನ್ನು ಮಿಕ್ಸ್‌ ಮಾಡಿ ಕಣ್ಣಿನ ಸುತ್ತ ಹಚ್ಚಿ 25 ನಿಮಿಷಗಳ ಬಳಿಕ ವಾಶ್‌ ಮಾಡಿ.
  • ಟೀ ಬ್ಯಾಗ್:‌ 15 ನಿಮಿಷಗಳ ಕಾಲ ಟೀ ಬ್ಯಾಗ್‌ ಅನ್ನು ಫ್ರಿಡ್ಜ್‌ ನಲ್ಲಿ ಇಟ್ಟು ನಂತರ ಅದನ್ನ ಕಣ್ಣಿನ ಮೇಲೆ ಇಡಬಹುದು.
  • ಕಿತ್ತಳೆ ರಸ: ಕಿತ್ತಳೆ ಹಣ್ಣಿನ ರಸವನ್ನು ತೆಗೆದು ಡಾರ್ಕ್‌ ಸರ್ಕಲ್‌ ಇರುವ ಕಡೆ ಹಚ್ಚುಬೇಕು.
  • ಅಲೋವಿರಾ: ಅಲೋವಿರಾ ಜೆಲ್‌ ಅನ್ನು ಪ್ರತಿನಿತ್ಯ ರಾತ್ರಿ ಕಣ್ಣಿನ ಸುತ್ತ ಹಚ್ಚಿ ಮಲಗಿ, ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆಯಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!