ಸಂಜೆ ಸಮಯಕ್ಕೆ ಏನಾದರೂ ಖಾರವಾಗಿ ಮತ್ತು ಚಟಪಟ ಅಂತ ತಿನ್ನಬೇಕು ಅನ್ನಿಸಿದಾಗ ನೆನಪಾಗುವುದು ಮಂಚೂರಿ. ಗೋಬಿ ಅಥವಾ ಚಿಕನ್ ಮಂಚೂರಿ ಸವಿದು ಬೇಜಾರಾಗಿದ್ದರೆ, ಈ ಬಾರಿ ಒಮ್ಮೆ ‘ಎಗ್ ಮಂಚೂರಿ’ ಪ್ರಯತ್ನಿಸಿ.
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆಗಳು
ಈರುಳ್ಳಿ
ಕ್ಯಾಪ್ಸಿಕಂ
ಹಸಿ ಮೆಣಸಿನಕಾಯಿ
ಶುಂಠಿ ಮತ್ತು ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು ಮತ್ತು ಸ್ಪ್ರಿಂಗ್ ಆನಿಯನ್
ಎಣ್ಣೆ
ಮೈದಾ ಹಿಟ್ಟು
ಕಾರ್ನ್ ಫ್ಲೋರ್
ಅಚ್ಚಖಾರದ ಪುಡಿ
ಕಾಳುಮೆಣಸಿನ ಪುಡಿ
ಉಪ್ಪು
ನೀರು
ಟೊಮೆಟೊ ಸಾಸ್
ರೆಡ್ ಚಿಲ್ಲಿ ಸಾಸ್
ಸೋಯಾ ಸಾಸ್
ವಿನೆಗರ್
ಕಾರ್ನ್ ಫ್ಲೋರ್ ಸ್ಲರಿ
ಮಾಡುವ ವಿಧಾನ
ಒಂದು ಬೌಲ್‌ನಲ್ಲಿ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಖಾರದಪುಡಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ. ಸ್ವಲ್ಪ ನೀರು ಹಾಕಿ ದಪ್ಪಗಾದ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಕರಿಯಲು ಎಣ್ಣೆ ಬಿಸಿ ಮಾಡಿ. ಬೇಯಿಸಿದ ಮೊಟ್ಟೆಯ ತುಂಡುಗಳನ್ನು ಈ ಹಿಟ್ಟಿನಲ್ಲಿ ಮುಳುಗಿಸಿ, ಬಿಸಿ ಎಣ್ಣೆಗೆ ಬಿಡಬೇಕು. ಮೊಟ್ಟೆಗಳು ಗೋಲ್ಡನ್ ಬ್ರೌನ್ ಮತ್ತು ಕ್ರಿಸ್ಪಿ ಆಗುವವರೆಗೆ ಮಧ್ಯಮ ಉರಿಯಲ್ಲಿ ಕರಿದು ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ಮತ್ತೊಂದು ಪ್ರತ್ಯೇಕ ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು. ನಂತರ ಹೆಚ್ಚಿದ ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ 2 ನಿಮಿಷಗಳ ಕಾಲ ಬಾಡಿಸಿ. ಈಗ ಮಾಡಿ ಟೊಮೆಟೊ ಸಾಸ್, ಚಿಲ್ಲಿ ಸಾಸ್, ಸೋಯಾ ಸಾಸ್ ಮತ್ತು ವಿನೆಗರ್ ಸೇರಿಸಿ ಚೆನ್ನಾಗಿ ಕೈಯಾಡಿಸಿ.
ನಂತರ ಕಾರ್ನ್ ಫ್ಲೋರ್ ನೀರನ್ನು ಸೇರಿಸಬೇಕು. ಸಾಸ್ ಕುದಿಯಲು ಆರಂಭಿಸಿದಾಗ, ಮುಂಚಿತವಾಗಿ ಕರಿದುಟ್ಟುಕೊಂಡ ಮೊಟ್ಟೆಯ ತುಂಡುಗಳನ್ನು ಪ್ಯಾನ್‌ಗೆ ಹಾಕಿ. ಸಾಸ್ ಎಲ್ಲಾ ಮೊಟ್ಟೆಗಳಿಗೆ ಸಮನಾಗಿ ಹತ್ತುವಂತೆ 1 ನಿಮಿಷಗಳ ಕಾಲ ಹೈ ಫ್ಲೇಮ್‌ನಲ್ಲಿ ವೇಗವಾಗಿ ಟಾಸ್ ಮಾಡಿ. ಕೊನೆಯದಾಗಿ ಮೇಲಿನಿಂದ ಸ್ಪ್ರಿಂಗ್ ಆನಿಯನ್ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿಬಿಸಿ, ಸ್ಪೈಸಿ ಎಗ್ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.



