ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ವಿರೋಧಿಸಿ ವಿಶ್ವದ ಹಲವು ರಾಷ್ಟ್ರಗಳು ಹಾಗೂ ಸಂಸ್ಥೆಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿವೆ.
ಈ ಪಟ್ಟಿಗೆ ಜಪಾನ್ ಮೂಲದ ಹೋಂಡಾ ಸಂಸ್ಥೆ ಕೂಡ ಒಂದಾಗಿದೆ. ಹೊಂಡಾ ತಾತ್ಕಾಲಿಕವಾಗಿ ತನ್ನ ಕಂಪನಿಯ ಉತ್ಪನ್ನಗಳಾದ ಕಾರು ಹಾಗೂ ಬೈಕ್ ಗಳ ರಫ್ತನ್ನು ಸ್ಥಗಿತಗೊಳಿಸಲಿದೆ.
ಈ ಬಗ್ಗೆ ರಾಯಿಟರ್ಸ್ ಸುದ್ದಿ ಸಂಸ್ಥೆ ಮಾಹಿತಿ ನೀಡಿದ್ದು, ಯುದ್ಧದ ಹೊತ್ತಿನಲ್ಲಿ ರಷ್ಯಾದಲ್ಲಿ ಹೂಡಿಕೆ ಮಾಡಿದರೆ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾದೀತು ಎಂದು ತಿಳಿಸಿದೆ.
2020ರ ಹಣಕಾಸು ವರ್ಷದಲ್ಲಿ ಹೋಂಡಾ ರಷ್ಯಾದಲ್ಲಿ 1406 ಹೊಸ ಕಾರುಗಳನ್ನು ಮಾರಾಟ ಮಾಡಿದೆ. ಜಪಾನಿನ ಮತ್ತೊಂದು ಮೋಟಾರ್ ಸಂಸ್ಥೆ ಮಿತ್ಸುಬಿಷಿ ರಷ್ಯಾದಲ್ಲಿ ತನ್ನ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.