ಶಾರುಖ್‌ ಅಭಿನಯದ ʼಪಠಾಣ್‌ʼ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರುಕ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ಪಠಾಣ್‌ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. 2023ರ ಗಣರಾಜ್ಯೋತ್ಸವದ ಹಿಂದಿನ ದಿನ ಜ.25 ರಂದು ಚಿತ್ರ ತೆರೆಗೆ ಅಪ್ಪಳಿಸಲಿದೆ.
2018ರಲ್ಲಿ ತೆರೆಕಂಡಿದ್ದ ʼಜೀರೋʼ ಹೀನಾಯ ಸೋಲಿನ ಬಳಿಕ ಬರೊಬ್ಬರಿ 4 ವರ್ಷ ಗ್ಯಾಪ್‌ ಪಡೆದಿದ್ದ ಶಾರುಖ್‌, ಇದೀಗ ʼಪಠಾಣ್‌ʼ ಮೂಲಕ ಕಂಬ್ಯಾಕ್‌ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್‌ ಉದ್ದ ಕೂದಲನ್ನು ಬಿಟ್ಟು, ಸ್ಟೈಲಿಶ್‌ ಲುಕ್‌ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಭರ್ಜರಿ ಆಕ್ಷನ್‌ ದೃಶ್ಯಗಳಿವೆ.

ಕಳೆದ ಕೆಲ ವರ್ಷಗಳಿಂದ ಕಿಂಗ್‌ ಖಾನ್‌ ನಟನೆಯ ಸಾಲು ಸಾಲು ಚಿತ್ರಗಳು ಸೋತು ನೆಲಕಚ್ಚಿವೆ, ಈ ಸಿನಿಮಾದ ಮೂಲಕ ಶಾರುಖ್‌ ಹಳೇ ಖದರ್‌ ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಸಹಜವಾಗಿಯೇ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆಯೂ ದುಪ್ಪಟ್ಟಾಗಿದೆ.
ʼವಾರ್‌ʼ ಚಿತ್ರ ಖ್ಯಾತಿಯ ಸಿದ್ಧಾರ್ಥ್‌ ಆನಂದ್‌ ನಿರ್ದೇಶನ ಚಿತ್ರಕ್ಕಿದೆ. ಹೀರೋಯಿನ್‌ ಆಗಿ ದೀಪಿಕಾ ಪಡುಕೋಣೆ ಬಣ್ಣ ಹಚ್ಚಿದ್ದು, ಜಾನ್‌ ಅಬ್ರಹಂ ವಿಲನ್‌ ಆಗಿ ಅಬ್ಬರಿಸಲಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!