Thursday, December 1, 2022

Latest Posts

ಶಾಸಕ ಜಿ.ಎಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ, ನಗ್ನಯುವತಿಯಿಂದ ವೀಡಿಯೋ ಕಾಲ್

ಹೊಸದಿಗಂತ ವರದಿ ಚಿತ್ರದುರ್ಗ:

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಯುವತಿಯೊಬ್ಬಳು ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡುವ ಮೂಲಕ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವುವ ಪ್ರಯತ್ನ ಮಾಡಿದ್ದಾಳೆ.
ಕಳೆದ ಎರಡು ದಿನಗಳ ಹಿಂದೆ ಸೋಮವಾರದ ದಿನ ಶಾಸಕರು ತಮ್ಮ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸುತ್ತಿದ್ದರು.
ಈ ಸಂದರ್ಭದಲ್ಲಿ ಅಪರಿಚತ ಯುತಿಯೊಬ್ಬಳು ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದಾಳೆ. ಕೂಡಲೇ ಇದರಿಂದ ಎಚ್ಚೆತ್ತುಕೊಂಡ ಶಾಸಕ ತಿಪ್ಪಾರೆಡ್ಡಿ ಅವರು, ವಿಡಿಯೋ ಕಾಲ್ ಕಟ್ ಮಾಡಿದ್ದಾರೆ. ಅಪರಿತರು ಶಾಸಕರನ್ನ ಹನಿಟ್ರ್ಯಾಪ್ ಗೆ ಬೀಳಿಸುವ ಯತ್ನ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಶಾಸಕ ತಿಪ್ಪಾರೆಡ್ಡಿ ಅವರು ಚಿತ್ರದುರ್ಗ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ನಗ್ನವಾಗಿ ವಿಡಿಯೋ ಕಾಲ್ ಮಾಡಿದ ಯುವತಿ ಅಥವಾ ಹನಿಟ್ರ್ಯಾಪ್ ಗ್ಯಾಂಗ್ ಪತ್ತೆಗೆ ಬಲೆ ಬೀಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!