ʼದಿನಕ್ಕೆ 12 ಗಂಟೆ ವಾರದ 7 ದಿನ ಕೆಲಸ ಮಾಡಿ ಇಲ್ಲವೇ ಹೊರಹೋಗಿʼ: ಟ್ವೀಟರ್‌ ಉದ್ಯೋಗಿಗಳಿಗೆ ಹೊಸ ನಿಯಮ ಸೃಷ್ಟಿಸಿದ ಮಸ್ಕ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟ್ವೀಟರ್‌ ಅನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿರುವ ಎಲಾನ್‌ ಮಸ್ಕ್ ಇದೀಗ ಪ್ಲಾಟ್‌ಫಾರ್ಮ್‌ನಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕೆಲವು ದೊಡ್ಡ ನಿರ್ಧಾರಗಳನ್ನು ಮಾಡಿದ್ದಾರೆ. CNBC ಮೂಲಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, ಕೆಲವು ಟ್ವಿಟರ್ ಎಂಜಿನಿಯರ್‌ಗಳು ದಿನಕ್ಕೆ 12 ಗಂಟೆಗಳು ಮತ್ತು ವಾರದ ಏಳು ದಿನಗಳು ಕೆಲಸ ಮಾಡುವಂತೆ ಕೇಳಲಾಗಿದೆ. ಎಲೋನ್ ಮಸ್ಕ್ ನೀಡಿರುವ ಬಿಗಿಯಾದ ಗಡುವನ್ನು ಪೂರೈಸಲು ಅವರು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಟ್ವಿಟರ್‌ನಲ್ಲಿನ ವ್ಯವಸ್ಥಾಪಕರು ಉದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

“ಓವರ್‌ಟೈಮ್ ಪೇ ಅಥವಾ ಕಾಂಪ್ ಟೈಮ್” ಅಥವಾ ಕೆಲಸದ ಭದ್ರತೆಯ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಲು ಉದ್ಯೋಗಿಗಳನ್ನು ಕೇಳಲಾಗಿದೆ ಎಂದು ಮೂಲಗಳ ವರದಿ ಬಹಿರಂಗ ಪಡಿಸಿದೆ. ನವೆಂಬರ್ ಆರಂಭದಲ್ಲಿ ಎಂಜಿನಿಯರ್‌ ಗಳಿಗೆ ಗಡುವು ನೀಡಲಾಗಿದ್ದು ಅವಶ್ಯಕತೆಗಳನ್ನು ಪೂರೈಸಲು ವಿಫಲವಾದರೆ, ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳಬಹುದು ಎಂದು ಸೂಚಿಸಲಾಗಿದೆ.

ಎಲೋನ್ ಮಸ್ಕ್ ಅವರು ತಮ್ಮ ಆದೇಶವನ್ನು ಅನುಸರಿಸಲು ನೌಕರರಿಗೆ ಒತ್ತಾಯಿಸಲು 50 ಪ್ರತಿಶತದಷ್ಟು ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!