ಕೋವಿಡ್‌ 5ನೇ ಅಲೆಯ ಭೀತಿ: ಭಾರತ ಸೇರಿ 8 ರಾಷ್ಟ್ರಗಳ ವಿಮಾನಗಳನ್ನು ನಿಷೇಧಿಸಿದ ಹಾಂಗ್‌ ಕಾಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈಗಾಗಲೇ ಕೋವಿಡ್‌ ಹಾಗೂ ಒಮಿಕ್ರಾನ್‌ ಗೆ ತತ್ತರಿಸಿರುವ ಹಾಂಗ್ ಕಾಂಗ್‌ ಈಗ ಮತ್ತಷ್ಟು ಬಿಗಿ ಕ್ರಮ ಕೈಗೊಂಡಿದೆ. ಭಾರತ, ಆಸ್ಟ್ರೇಲಿಯಾ ಸೇರಿದಂತೆ 8 ರಾಷ್ಟ್ರಗಳ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿದೆ.
ಕೋವಿಡ್‌ ನ 5ನೇ ಅಲೆಯ ಭೀತಿಯಿಂದ ಹಾಂಗ್‌ ಕಾಂಗ್‌ ಜ.8ರಿಂದ-ಜ.21ರವೆರೆಗೆ ಭಾರತ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್‌, ಪಾಕಿಸ್ತಾನ, ಫಿಲಿಪೈನ್ಸ್‌, ಬ್ರಿಟನ್‌ ಹಾಗೂ ಅಮೆರಿಕದಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿದೆ. ನಿಯಮ ಸಡಿಲಗೊಳ್ಳುವವರಗೆ ಈ ರಾಷ್ಟ್ರಗಳಿಂದ ಹಾಂಗ್‌ ಕಾಂಗ್‌ ಗೆ ಯಾವುದೇ ವಿಮಾನ ಇಳಿಯುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ.
ಹಾಂಗ್‌ ಕಾಂಗ್‌ ನಲ್ಲಿ ಕಟ್ಟು ನಿಟ್ಟಿನ ಕ್ರಮವಿದ್ದರೂ ಕೂಡ ಜನರು ಕೋವಿಡ್‌ ಗೆ ಗುರಿಯಗುತ್ತಿದ್ದಾರೆ. ಇದರ ವೇಗ ತಡೆಯಲು ದೇಶಾದ್ಯಂತ ಸಂಜೆ 6 ಗಂಟೆಯ ನಂತರ ಕರ್ಫ್ಯೂ ವಿಧಿಸಲಾಗಿದೆ. ಒಮಿಕ್ರಾನ್‌ ಹೆಚ್ಚಾಗಿರುವುದರಿಂದ ಜಿಮ್‌, ಪಬ್‌, ಕ್ಲಬ್‌, ಕ್ರೀಡಾಂಗಣ, ಈಜುಕೊಳ ಸೇರಿದಂತೆ ಸೋಂಕು ಹರಡಬಹುದಾದ ಬಹುತೇಕ ಸ್ಥಳಗಳನ್ನು ಬಂದ್‌ ಮಾಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!