SHOCKING NEWS | ಹಾಂಗ್‌ಕಾಂಗ್ ಫೇಮಸ್ ಮಾಡೆಲ್ ಅಬ್ಬಿ ಚೋಯ್ ಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಂಕಾಂಗ್‌ನ ಜನಪ್ರಿಯ ಮಾಡೆಲ್ ಅಬ್ಬಿ ಚೋಯ್ ಹತ್ಯೆಯಾಗಿದ್ದು, ಮಾಜಿ ಪತಿ ಹಾಗೂ ಅತ್ತೆಯ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬ್ಯೂಟಿಯಿಂದಲೇ ಫೇಮಸ್ ಆದ ಅಬ್ಬಿಗೆ ಸಾಕಷ್ಟು ಫ್ಯಾನ್ಸ್ ಇದ್ದಾರೆ. ಅಬ್ಬಿ ಮಾಜಿ ಪತಿ ಅಲೆಕ್ಸ್ ಕ್ವಾಂಗ್, ಅವರ ತಾಯಿ ಜೆನ್ನಿ ಲೀ, ತಂದೆ ಕ್ವಾಂಗ್ ಕೌ ಮತ್ತು ಅವರ ಸಹೋದರ ಆಂಥೋನಿ ಕ್ವಾಂಗ್ ವಿರುದ್ಧ ಆರೋಪ ಹೊರಿಸಲಾಗಿದ್ದು, ಯಾರಿಗೂ ಜಾಮೀನು ಸಿಕ್ಕಿಲ್ಲ.

ಫ್ಯಾಶನ್ ಮ್ಯಾಗಜೀನ್ ಡೀವಾ ಅಬ್ಬಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫ್ಯಾನ್ಸ್ ಇದ್ದಾರೆ. ಏಕಾಏಕಿ ಅಬ್ಬಿ ಕಾಣೆಯಾಗಿದ್ದರು. ಇದಾದ ಕೆಲ ದಿನಗಳ ನಂತರ ಮನೆಯ ಫ್ರಿಡ್ಜ್ ಒಂದರಲ್ಲಿ ಅಬ್ಬಿ ಮೃತದೇಹದ ಭಾಗಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.

ಮಾಜಿ ಪತಿ ಹಾಗೂ ಅಬ್ಬಿಗೆ ಆಸ್ತಿ ವಿಷಯದಲ್ಲಿ ಆಗಾಗ ಜಗಳ ಆಗುತ್ತಿತ್ತು. ಅಬ್ಬಿ ಬಳಿ ಇರುವ ಆಸ್ತಿಗಾಗಿ ಈ ಕೊಲೆ ನಡೆದಿದೆ ಎಂದು ಆರೋಪ ಮಾಡಲಾಗಿದೆ. ಮೃತದೇಹ ಇದ್ದ ಮನೆಯಲ್ಲಿ ಮಾಂಸ ಕತ್ತರಿಸುವ ಯಂತ್ರ, ರೈನ್‌ಕೋಟ್, ಮಾಸ್ಕ್ ಎಲ್ಲವೂ ಪತ್ತೆಯಾಗಿದೆ. ಅಬ್ಬಿ ಚೋಯ್ ಅವರ ಮಾಜಿ ಪತಿ ದೇಶ ಬಿಟ್ಟು ಓಡಿ ಹೋಗಲು ಬೋಟ್‌ಗಾಗಿ ಕಾಯುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!