Tuesday, March 28, 2023

Latest Posts

ಪೋಸ್ಟ್‌ ಬಜೆಟ್‌ ವೆಬಿನಾರ್‌ : ಇಂದು ತಂತ್ರಜ್ಞಾನದ ಕುರಿತು ಮೋದಿ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೇಂದ್ರ ಬಜೆಟ್‌ ನಂತರದ ವೆಬಿನಾರ್‌ನ ಐದನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು “ಅನ್ ಲೀಸಿಂಗ್ ದ ಪೊಟೆನ್ಶಿಯಲ್ ಈಸಿ ಆಫ್ ಲಿವಿಂಗ್ ಯೂಸಿಂಗ್ ಟೆಕ್ನಾಲಜಿ” ವಿಷಯದ ಕುರಿತು ಬೆಳಿಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ​ ಮಾತನಾಡಲಿದ್ದಾರೆ.

ಈ ವೆಬ್‌ನಾರ್ ನಲ್ಲಿ ಡಿಜಿಲಾಕರ್ ಘಟಕ, ರಾಷ್ಟ್ರೀಯ ಡೇಟಾ ಆಡಳಿತ, ವಿಳಾಸ ನವೀಕರಣ ಸೌಲಭ್ಯ, ಫಿನ್‌ಟೆಕ್ ಸೇವೆಗಳು, ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮತ್ತು ಮಿಷನ್ ಕರ್ಮಯೋಗಿ, ಇ-ಕೋರ್ಟ್‌ಗಳು, 5 ಜಿ ಮತ್ತು ವ್ಯಾಪಾರ ಸುಲಭಗೊಳಿಸುವ ಸಂಬಂಧ ಬಜೆಟ್ ಪ್ರಕಟಣೆಯ ಕುರಿತು ಚರ್ಚಿಸಲಿದ್ದಾರೆ. ಜೊತೆಗೆ ಕೆಐಸಿ, ಸಾಮಾನ್ಯ ವ್ಯಾಪಾರ ಗುರುತಿಸುವಿಕೆ, ಏಕೀಕೃತ ಫೈಲಿಂಗ್ ಪ್ರಕ್ರಿಯೆಯ ಬಗ್ಗೆಯೂ ಮಾತನಾಡಲಿದ್ದಾರೆ.

ಈ ವೆಬಿನಾರ್​ನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಈ ವೆಬಿನಾರ್​ನಲ್ಲಿ ಕೇಂದ್ರ ಐಟಿ ಸಚಿವಾಲಯ, ಡಿಪಿಐಐಟಿ, ನ್ಯಾಯಾಂಗ ಇಲಾಖೆ, ಟೆಲಿಕಾಂ ಇಲಾಖೆ, ಹಣಕಾಸು ಇಲಾಖೆ ಮತ್ತು ವಾಣಿಜ್ಯ ಇಲಾಖೆಗೆ ಸಂಬಂಧಿಸಿದ ವಿಷಯ ಮತ್ತು ವಿಶೇಷತೆಗಳಿಗೆ ಸಂಬಂಧಿಸಿದ ಬಜೆಟ್ ಪ್ರಕಟಣೆಗಳ ಕುರಿತು ಇದು ಚರ್ಚೆಗಳನ್ನು ಒಳಗೊಂಡಿರುತ್ತದೆ.

ರಾಜ್ಯ ಸರ್ಕಾರಗಳು, ಕೈಗಾರಿಕೆಗಳು, ಸ್ಟಾರ್ಟ್ ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ನಾಗರಿಕ ಸಮಾಜಗಳ ಮಧ್ಯಸ್ಥಗಾರರು ಮತ್ತು ತಜ್ಞರು ಪ್ರಮುಖ ಬಜೆಟ್ ಘೋಷಣೆಗಳಿಗೆ ಸಂಬಂಧಿಸಿದ ಮೈಲಿಗಲ್ಲುಗಳು ಮತ್ತು ಯೋಜನೆ ಅನುಷ್ಠಾನ ಬಗ್ಗೆ ಚರ್ಚಿಸುತ್ತಾರೆ.

ವೆಬಿನಾರ್​​ನಲ್ಲಿ ದೇಬ್ಜಾನಿ ಘೋಷ್, ನಾಸ್ಕಾಮ್, ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್, ಪವನ್ ಗೋಯೆಂಕಾ,ಮಹೀಂದ್ರಾ ಲಿಮಿಟೆಡ್, ಆಕಾಶ್ ಅಂಬಾನಿ, ರಿಲಯನ್ಸ್ ಜಿಯೋ ಇನ್ಫೋಕಾಮ್ ಮುಂತಾದ ಹಲವಾರು ಗಣ್ಯ ವ್ಯಕ್ತಿಗಳು ಭಾಗಿಯಾಗುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!