Wednesday, March 29, 2023

Latest Posts

ಪ್ರವಾಸೋದ್ಯಮ ಉತ್ತೇಜನ: 5 ಲಕ್ಷ ಉಚಿತ ವಿಮಾನ ಟಿಕೆಟ್ ಘೋಷಿಸಿದ ಹಾಂಕಾಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರೋನಾ ಮಹಾಮಾರಿ ವಿಶ್ವದ ದೇಶಗಳನ್ನು ಬಾಧಿಸಿರುವುದು ಗೊತ್ತೇ ಇದೆ. ವೈರಸ್ ಹರಡುವಿಕೆಯಿಂದ ಲಕ್ಷಾಂತರ ಜನರು ಸಾವನ್ನಪ್ಪಿದ್ದು, ಜಗತ್ತಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೋವಿಡ್‌ನಿಂದ ಎಲ್ಲಾ ಕ್ಷೇತ್ರಗಳು ಬಾಧಿತವಾಗಿವೆ. ವಿಶ್ವಾದ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಕೊರೊನಾ ಸೋಂಕಿನಿಂದ ತತ್ತರಿಸಿರುವ ಹಲವು ದೇಶಗಳು ಈಗ ಚೇತರಿಸಿಕೊಳ್ಳುತ್ತಿವೆ.

ಆರ್ಥಿಕತೆಯನ್ನು ಸುಧಾರಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೋವಿಡ್‌ನಿಂದಾಗಿ ಭಾರೀ ನಷ್ಟವನ್ನು ಅನುಭವಿಸಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಹಾಂಕಾಂಗ್ ಭಾರಿ ಕೊಡುಗೆಗಳನ್ನು ಪ್ರಕಟಿಸುತ್ತಿದೆ. ಪ್ರವಾಸಿಗರನ್ನು ಸೆಳೆಯಲು 5 ಲಕ್ಷ ಉಚಿತ ವಿಮಾನ ಟಿಕೆಟ್ ಘೋಷಿಸಿದೆ.

ಹಲೋ ಹಾಂಗ್ ಕಾಂಗ್ ಉಚಿತ ವಿಮಾನ ಟಿಕೆಟ್‌ಗಳು, ಉಚಿತ ವೋಚರ್‌ಗಳು ಮತ್ತು ವಿಶೇಷ ಕೊಡುಗೆಗಳನ್ನು ಸಹ ನೀಡುತ್ತಿದೆ. ಅದೇ ರೀತಿ ಲಕ್ಕಿ ಡ್ರಾ, ಒಂದನ್ನು ಖರೀದಿಸಿ ಒಂದು ಉಚಿತ ಎಂಬಂತಹ ಕೊಡುಗೆಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಕಾರ್ಯಾಚರಣೆಗಳು ಮಾರ್ಚ್ ತಿಂಗಳವರೆಗೆ ಲಭ್ಯವಿರುತ್ತವೆ ಎಂದು ಆ ದೇಶದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!