ಮರ್ಯಾದಾ ಹತ್ಯೆ ಪ್ರಕರಣ: ಸುಮೋಟೊ ಕೇಸ್ ಹಾಕ್ತೇವೆ ಎಂದ ಸಚಿವ ಡಾ.ಜಿ.ಪರಮೇಶ್ವರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ನಡೆದ ಮರ್ಯಾದಾ ಹತ್ಯೆ ಕುರಿತು ಸುಮೋಟೊ ಕೇಸ್ (Sumoto Case) ದಾಖಲು ಮಾಡುವ ಬಗ್ಗೆ ಗೃಹ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr G.Parameshwar) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಪ್ರಕರಣದ ಕುರಿತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಪ್ರಕಾರ ಯಾರಾದರೂ ದೂರು ಕೊಡಬೇಕು. ದೂರು ಕೊಡದೇ ಹೋದರೂ ಸುಮೋಟೊ ಕೇಸ್ ದಾಖಲು ಮಾಡಲು ಅವಕಾಶ ಇದೆ. ಸುಮೋಟೊ ಕೇಸ್ ಪೊಲೀಸರು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಸಮಾಜದಲ್ಲಿ ಇಂತಹ ಘಟನೆ ಆಗಬಾರದು. ಸಮಾಜದಲ್ಲಿ ಇದೊಂದು ದೊಡ್ಡ ಪಿಡುಗು ತರಹ ಆಗುತ್ತಿದೆ. ನಾನು ಕಾನೂನು ಪ್ರಕಾರ ನಿಲ್ಲಿಸಬಹುದು. ಆದರೆ ಜನರು ಇದನ್ನು ಇನ್ನೂ ಹೆಚ್ಚು ಅರ್ಥ ಮಾಡಿಕೊಳ್ಳಬೇಕುಎಂದರು.

ಕೆಲವು ಸಮಯದಲ್ಲಿ ಪೋಷಕರೇ ದೂರು ಕೊಡುತ್ತಾರೆ. ಆಗ ಕಾನೂನು ಪ್ರಕಾರ ಕ್ರಮ ಆಗಿ ಶಿಕ್ಷೆ ಆಗುತ್ತದೆ. ಈ ಕೇಸ್‌ನಲ್ಲಿ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು

ಕೋಲಾರದ ತೊಟ್ಲಿ ಗ್ರಾಮದಲ್ಲಿ ವರಮಹಾಲಕ್ಷ್ಮೀ ಹಬ್ಬದ ದಿನವೇ ವೆಂಕಟೇಶಗೌಡ ಎಂಬುವರು ತಮ್ಮ 19 ವರ್ಷದ ಮಗಳನ್ನೇ ಕೊಂದು ಹಾಕಿದ್ದರು. ಮಗಳು ಬೇರೆ ಸಮುದಾಯದ ಅಪ್ರಾಪ್ತ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಮಗಳ ಪ್ರಾಣ ತೆಗೆದಿದ್ದರು. ರಾಜ್ಯದಲ್ಲಿ ಎರಡು ಕಡೆಗಳಲ್ಲಿ ಮರ್ಯಾದೆಗೇಡು ಪ್ರಕರಣಗಳು ನಡೆದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!