ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ಗೆ ಗೌರವ ಡಾಕ್ಟರೇಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ಅವರು ಅವರಿಗೆ ಕೆನಡಾದ ಸಂಗೀತ ಕಲಾ ಸಂಸ್ಥೆಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಮೂಲಕ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಮೂಲಕ ಸಂಗೀತಕ್ಕೆ ಮತ್ತೊಂದು ಗೌರವ ಗರಿ ದೊರಕಿದಂತಾಗಿದೆ.

ಕೆನಡಾದ (Canada) ಟೊರಾಂಟೋದಲ್ಲಿ (Toronto) ‘ರಿಚ್ಮಂಡ್ ಗ್ರಾಬ್ರಿಯಲ್ Richmond Gabriel University’ಮೂಲಕ ಸಂಗೀತ ಕಲೆಗೆ ನೀಡಲಾಗುವ ಗೌರವ್ ಡಾಕ್ಟರೇಟ್ಅನ್ನು ಭಾರತದ, ಅದರಲ್ಲೂ ಮಖ್ಯವಾಗಿ ಕನ್ನಡಿಗ ಸಿಂಗರ್ ವಿಜಯ್ ಪ್ರಕಾಶ್ ಗಳಿಸಿದ್ದಾರೆ.

ಗಾಯಕ ವಿಜಯ್ ಪ್ರಕಾಶ್ ಅವರು ಮೂಲತಃ ಮೈಸೂರಿನ ಗಾಯಕರಾಗಿದ್ದು, ಸಂಗೀತದ ಅಭ್ಯಾಸವನ್ನು ಹೆಚ್ಚಾಗಿ ಮುಂಬೈನಲ್ಲಿ ಮಾಡಿದ್ದಾರೆ. ಹಿಂದಿಯ ‘ಸರಗಮಪ’ ಸೇರದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಮನಸೆಳೆದಿದ್ದ ಗಾಯಕ ವಿಜಯ್ ಪ್ರಕಾಶ್ ಅವರು ಸಾಕಷ್ಟು ಹಿಂದಿಯ ಆಲ್ಬಂ ಸಾಂಗ್‌ಗಳಿಗೂ ಧ್ವನಿಯಾಗಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರವಾದ ಭಾರತದ ‘ಸ್ಲಂ ಡಾಗ್ ಮಿಲೇನಿಯರ್’ ನಲ್ಲಿ ‘ಜೈ ಹೋ’ ಹಾಡಿಗೆ ಧ್ವನಿಯಾಗುವ ಮೂಲಕ ವಿಜಯ್ ಪ್ರಕಾಶ್ ಬಹಳಷ್ಟು ಪ್ರಸಿದ್ಧಿ ಪಡೆದರು.

ಕೆನಡಾದ ಗೌರವ್ ಡಾಕ್ಟರೇಟ್ ಪಡೆಯುವ ಮೂಲಕ ಡಾ ವಿಜಯ್ ಪ್ರಕಾಶ್ ಆಗಿ ಬದಲಾಗಿರುವ ಅವರು, ತಮ್ಮ ಬದುಕಿನ ಸಂಗೀತದ ಹೊಸದೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ. ಈ ಸಂತೋಷದ ಘಳಿಗೆಯಲ್ಲಿ ಅವರಿಗೆ ದೇಶ-ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!