Sunday, June 26, 2022

Latest Posts

ಕಾರ್ಯಕ್ರಮದಲ್ಲಿ ಗೂಂಡಾಗಿರಿ ಮತ್ತು ಅಸಭ್ಯ ವರ್ತನೆ : ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ದಿಗಂತ ವರದಿ ಹುಬ್ಬಳ್ಳಿ:

ರಾಮನಗರದಲ್ಲಿ ಸೋಮವಾರ ಸಿಎಂ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಡಿ.ಕೆ ಸುರೇಶ ಮತ್ತು ವಿಪ ಸದಸ್ಯ ರವಿಯ ಗೂಂಡಾಗಿರಿ ಮತ್ತು ಅಸಭ್ಯ ವರ್ತನೆ ಮಾಡಿರುವುದನ್ನು ವಿರೋಧಿಸಿ ಮಂಗಳವಾರ ನಗರದ ರಾಯಣ್ಣ ವೃತ್ತದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಮಾಡಿದರು.

ಕಾಂಗ್ರೆಸ್ ಗೂಂಡಾಗಿರಿಗೆ ದಿಕ್ಕಾರ, ಗೂಂಡಾ ಸಹೋದರರಾದ ಡಿ.ಕೆ.ಸುರೇಶ ಮತ್ತು ಡಿ.ಕೆ ಶಿವಕುಮಾರಗೆ ದಿಕ್ಕಾರ, ಕಾಂಗ್ರೆಸ್ ಗೂಂಡಾ ಸಂಸ್ಕೃತಿಗೆ ದಿಕ್ಕಾರ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಡಿ.ಕೆ ಸುರೇಶ ಹಾಗೂ ರವಿಯವರ ಭಾವಚಿತ್ರಗಳನ್ನು ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಇಡೀ ದೇಶದಲ್ಲಿ ಕಾಂಗ್ರೆಸ್ ಗೂಂಡಾಗಿರಿ ವರ್ತನೆ ಮುಂದುವರಿದಿದೆ. ಇದನ್ನು ಜನಸಾಮಾನ್ಯರ ನೋಡುತ್ತಿದ್ದಾರೆ. ಬಿಜೆಪಿ ಅಭಿವೃದ್ಧಿ ಶ್ರಮಿಸಿದರೆ ಕಾಂಗ್ರೆಸ್ ನಾಯಕರು ಗೂಂಡಗಿರಿ ಮಾಡುವ ಮೂಲಕ ಆಡಳಿತ ಮಾಡುತ್ತಿದ್ದಾರೆ. ಪದೇ ಪದೆ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದಾರೆ. ಇವರ ಈ ವರ್ತನೆಗೆ ಜನರು ತಕ್ಕ ಉತ್ತರ ಮುಂಬರುವ ದಿನಗಳಲ್ಲಿ ಕೊಡುತ್ತಾರೆ. ಬಿಜೆಪಿ ಅಭಿವೃದ್ಧಿ ಕಾರ್ಯ ಮಾಡುತ್ತಿರುವುದ ಇವರಿಗೆ ಸಹಿಸಲು ಆಗುತ್ತಿಲ್ಲ.

ಆದರಿಂದ ಬಿಜೆಪಿ ನಾಯಕ ಮತ್ತು ಕಾರ್ಯಕರ್ತ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ರಾಮನಗರದಲ್ಲಿ ರಾಜ್ಯದ ಪ್ರಥಮ ಪ್ರತಿನಿಧಿ ಎದುರಿಗೆ ಈ ರೀತಿಯಾಗಿ ವರ್ತಿಸಿದ್ದು, ಸರಿಯಲ್ಲ. ಅವರ ಹಳೆ ಚಾಳಿ ಮತ್ತೆ ಮುಂದುವರಿದಿದೆ. ಜನಸಾಮಾನ್ಯರ ಮತ್ತು ಬಿಜೆಪಿಯವರು ತೀವ್ರವಾಗಿ ಖಂಡಿಸುತ್ತದೆ ಎಂದರು.

ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ಮಲ್ಲಿಕಾರ್ಜನ ಸಾವಕಾರ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಜಿಲ್ಲಾ ವಕ್ತಾರರಾದ ರವಿ ನಾಯಕ, ಚಂದ್ರಶೇಖರ ಗೋಕಾಕ್, ರಂಗಾ ಬದ್ದಿ, ಸಿದ್ದು ಮೊಗಲಿಶೆಟ್ಟರ, ಶ್ರೀ ಬಸವರಾಜ ಅಮ್ಮಿನಬಾವಿ, ವಿರುಪಾಕ್ಷಿ ರಾಯನಗೌಡ್ರ, ಗೋಪಾಲ ಬದ್ದಿ, ಜಗದೀಶ ಬುಳ್ಳಾನವರ, ಶಿವಾನಂದ ಮುತ್ತಣ್ಣವರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss