ದಿನ ಭವಿಷ್ಯ | ನಿಮ್ಮ ಮೆಚ್ಚಿನ ವ್ಯಕ್ತಿಯ ಜತೆ ಭಾವನಾತ್ಮಕವಾಗಿ ಹತ್ತಿರವಾಗುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ

ವೃತ್ತಿಯಲ್ಲಿ ಬಿಡುವಿಲ್ಲದ ಒತ್ತಡ. ಹೊಣೆಗಾರಿಕೆ ಹೆಚ್ಚಳ. ಎಲ್ಲರ ಜತೆ ಉತ್ತಮ ಸಂವಹನ ಸಾಧಿಸಿ. ಸಣ್ಣ ವಿಷಯ ಕೌಟುಂಬಿಕ ಕಲಹಕ್ಕೆ ಕಾರಣವಾದೀತು.

ವೃಷಭ
ಸಂಗಾತಿ ಜತೆಗೆ ಕಠಿಣ ವರ್ತನೆ ಬಿಡಿ. ನಾನು ತಲೆಬಾಗಬಾರದು ಎಂಬಂತಹ ಹಠಮಾರಿತನ ಒಳಿತಲ್ಲ. ಹೊಂದಾಣಿಕೆ ಎಲ್ಲಕ್ಕಿಂತ ಮುಖ್ಯ.

ಮಿಥುನ
ಉದ್ಯೋಗದಲ್ಲಿ ಕೆಲವರು ನಿಮಗೆ ಸಮಸ್ಯೆ ಸೃಷ್ಟಿಸಬಹುದು. ಅವರ ಜತೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿ. ಕೌಟುಂಬಿಕ ಶಾಂತಿ.

ಕಟಕ
ವೃತ್ತಿಕ್ಷೇತ್ರದಲ್ಲಿ ಸೌಹಾರ್ದ ವಾತಾವರಣ. ಹಾಗಾಗಿ ಬಿಕ್ಕಟ್ಟು, ವಾಗ್ವಾದ ಶಮನ. ಮನೆಯಲ್ಲೂ ಖುಷಿ ತರುವ ಮನಸ್ಥಿತಿ. ಕುಟುಂಬಸ್ಥರ ಸಹಕಾರ.

ಸಿಂಹ
ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿ ಹೊರಬೇಕಾಗುವುದು. ಕೆಲಸಗಳ್ಳರಿಗೆ ನೆರವು ನೀಡಲು ಹೋಗದಿರಿ. ಅವರಿಂದಲೇ ಕೆಲಸ ಮಾಡಿಸುವುದೊಳಿತು.

ಕನ್ಯಾ
ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆ ಉಂಟಾದೀತು. ನಿಮ್ಮ ಹೊಣೆ ಸರಿಯಾಗಿ ನಿಭಾಯಿಸಿ. ಕುಂಟು ನೆಪ ಹೇಳಿ ಕರ್ತವ್ಯ ತಪ್ಪಿಸಬೇಡಿ.

ತುಲಾ
ನಿಮಗೆ ಪೂರಕವಾದ ದಿನ. ಮನೆಯಲ್ಲಿ ಭಾವನಾತ್ಮಕ ಸಂಘರ್ಷ ಉಂಟಾದರೂ ಬೇಗನೆ ಸರಿ ಹೋಗುವುದು. ಆಪ್ತ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ.

ವೃಶ್ಚಿಕ
ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ಉನ್ನತಿ ಸಾಧಿಸಲು ಅವಕಾಶ ಒದಗಲಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವುದು ನಿಮ್ಮ ಹೊಣೆಗಾರಿಕೆ.

ಧನು
ನಿಮಗೆ ಹಿನ್ನಡೆಯಾಗುವ ಬೆಳವಣಿಗೆ ಸಂಭವಿಸ ಬಹುದು. ಪ್ರತೀ ವಿಷಯದಲ್ಲೂ ಇಂದು ಎಚ್ಚರಿಕೆಯಿಂದ ಹೆಜ್ಜೆಯಿಡಿ. ನೈತಿಕ ಚೌಕಟ್ಟು ಮೀರದಿರಿ.

ಮಕರ
ಹೆಚ್ಚು ಕೆಲಸ, ಹೆಚ್ಚು ಒತ್ತಡ, ಹೆಚ್ಚು ಕಿರಿಕಿರಿ. ಇದು ಇಂದಿನ ನಿಮ್ಮ ದಿನಚರಿಯಾಗಲಿದೆ. ಆತ್ಮೀಯರ ಜತೆಗೇ ವಾಗ್ವಾದ ನಡೆದೀತು. ಮನಶ್ಯಾಂತಿ ದೂರ.

ಕುಂಭ
ನಿಮ್ಮ ವಿಶ್ವಾಸ ಹೆಚ್ಚಿಸುವ ಬೆಳವಣಿಗೆ. ನಿರ್ಧಾರದಲ್ಲಿ ಅಚಲವಾಗಿರಿ. ಯಾರದೋ ಪ್ರಭಾವಕ್ಕೆ ಒಳಗಾಗಿ ನಿಲುವು ಬದಲಿಸಬೇಡಿ.

ಮೀನ
ನಿಮ್ಮ ಮೆಚ್ಚಿನ ವ್ಯಕ್ತಿಯ ಜತೆ ಭಾವನಾತ್ಮಕವಾಗಿ ಹತ್ತಿರವಾಗುವಿರಿ. ತಪ್ಪು ಕಲ್ಪನೆ ನೀಗುವುದು. ಆರ್ಥಿಕವಾಗಿ ನಿಮ್ಮ ಹೂಡಿಕೆ ಉತ್ತಮ ಫಲ ನೀಡುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!