ದಿನಭವಿಷ್ಯ | ಇಂದು ಶುಭದಿನ! ಕೈಗೊಳ್ಳುವ ಹೊಸ ವ್ಯವಹಾರಗಳಿಗೆ ಯಶಸ್ಸು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಉತ್ಸಾಹದ ದಿನ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಆಪ್ತರ ಜತೆ ಪ್ರವಾಸ ಸಂಭವ. ಆರ್ಥಿಕ ಬಿಕ್ಕಟ್ಟು ನಿವಾರಣೆ. ಹಳೆಯ ಸ್ನೇಹಿತರ ಭೇಟಿ.

ವೃಷಭ
ಹಳೆಯ ಕಾರ್ಯ ಮುಗಿಸಲು ಇಂದಿನ ದಿನ ಉಪಯೋಗಿಸಿ.  ಕಾರ್ಯದಲ್ಲಿ ಸಫಲತೆ. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನವಿರಲಿ.

ಮಿಥುನ
ದೈನಂದಿನ ಹೊಣೆಗಾರಿಕೆ ನಿರ್ವಹಿಸುವಲ್ಲಿ ಅಸಡ್ಡೆ ತೋರದಿರಿ. ನಿಮ್ಮ ಕರ್ತವ್ಯ ನೆರವೇರಿಸಿ. ಖರ್ಚು ಹೆಚ್ಚಬಹುದು. ಅನವಶ್ಯ ಖರೀದಿಯನ್ನು ತಪ್ಪಿಸಿರಿ.

ಕಟಕ
ಪ್ರಮುಖ ಕಾರ್ಯಕ್ಕೆ ಅಡ್ಡಿ ಒದಗೀತು. ಅದನ್ನು ಮುಂದೂಡಿರಿ. ಹಳೆಯ ಸಮಸ್ಯೆಯೊಂದು ಮತ್ತೆ ತಲೆ ಎತ್ತಬಹುದು. ಶಾಶ್ವತ ಪರಿಹಾರ ಕಂಡುಕೊಳ್ಳಿ.

ಸಿಂಹ
ಇಂದು ಕೆಲವಾರು ಗುರಿಗಳನ್ನು  ಈಡೇರಿಸುವಿರಿ. ಹೊಸ ಐಡಿಯಾಗಳೂ ನಿಮಗೆ ಹೊಳೆಯಬಹುದು. ಉಳಿದವರ ಸಹಕಾರವೂ ಸಿಗುತ್ತದೆ.

ಕನ್ಯಾ
ಎಂದಿಗಿಂತ ಹೆಚ್ಚು ಕೆಲಸ ಮಾಡಬೇಕಾಗುವುದು. ದಿನದ ಆರಂಭದಲ್ಲಿ ಕಠಿಣ ಸವಾಲು ಎದುರಿಸುವಿರಿ. ಆದರೆ ಬಳಿಕ ಎಲ್ಲವೂ ನಿರಾಳವಾಗುವುದು.

ತುಲಾ
ಇಂದು ಕೈಗೊಳ್ಳುವ ಹೊಸ ವ್ಯವಹಾರ ಯಶಸ್ಸು ಕಾಣುವುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಹಣದ ವಿಚಾರವಾಗಿ ವಾಗ್ವಾದ ನಡೆದೀತು.

ವೃಶ್ಚಿಕ
ಸಂಬಂಧದಲ್ಲಿ ಸುಧಾರಣೆ. ಕೌಟುಂಬಿಕ ಸಮಸ್ಯೆ ನಿವಾರಣೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು. ಒಟ್ಟಿನಲ್ಲಿ ನಿಮಗಿಂದು ಶುಭ ದಿನ.

ಧನು
ಕ್ಲಿಷ್ಟಕರ  ಪರಿಸ್ಥಿತಿ ಎದುರಿಸುವಿರಿ. ಅದನ್ನು ಇನ್ನಷ್ಟು ಜಟಿಲವಾಗಲು ಅವಕಾಶ ಕೊಡಬೇಡಿ. ಸಮಸ್ಯೆ ಪರಿಹಾರಕ್ಕೆ ತುಸು ಹೊಂದಾಣಿಕೆ ಮಾಡಿಕೊಳ್ಳಿ.

ಮಕರ
ಅಧಿಕ ಕೆಲಸ. ಅಧಿಕ ಹೊಣೆಗಾರಿಕೆ. ಇದರಿಂದ ಮಾನಸಿಕ ಒತ್ತಡವೂ ಹೆಚ್ಚು. ವ್ಯವಹಾರದಲ್ಲಿ ಹಣದ ಹೂಡಿಕೆಯು ಉತ್ತಮ ಫಲ ನೀಡಲಿದೆ.

ಕುಂಭ
ಮಿಶ್ರಫಲದ ದಿನ. ನಿಮ್ಮ ಮಾತಿನ ಮೇಲೆ ಹೆಚ್ಚು ನಿಯಂತ್ರಣವಿರಲಿ. ಮಾತು ಮನೆ ಕೆಡಿಸಿತು ಎಂಬ ಗಾದೆ ನೆನಪಿಡಿ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.

ಮೀನ
ಆಪ್ತರ ಜತೆಗೆ ಹದಗೆಟ್ಟ ಸಂಬಂಧ ಇಂದು ಸುಧಾರಿಸಲಿದೆ. ಹಳೆಯ ವಾದವನ್ನೆ ಮುಂದುವರಿಸಲು ಹೋಗದಿರಿ. ಹೊಂದಾಣಿಕೆ ಮುಖ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!