ಕೋಟಿ ಸೂರ್ಯನ ತೇಜಸ್ಸಿರುವ ಸಿದ್ಧಿ ಧಾತ್ರಿ ದೇವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನ ಉದ್ಧಾರಕ್ಕಾಗಿ ದುರ್ಗೆ ನವರೂಪಗಳನ್ನು ಎತ್ತಿ ದುಷ್ಟರನ್ನು ಸಂಹರಿಸುತ್ತಾಳೆ. ಈ ನವದುರ್ಗೆಯ ಒಂಬತ್ತನೇ ಅವತಾರ ಸಿದ್ಧಿ ಧಾತ್ರಿ ದೇವಿ. ಈಕೆಯನ್ನು ನವರಾತ್ರಿಯ ಒಂಬತ್ತನೇ ದಿನ ಪೂಜಿಸಲಾಗುತ್ತದೆ. ಶಕ್ತಿ ಹಾಗೂ ವೈಭವದ ಮಹಿಮೆಯ ಮೂಲ ಸಿದ್ಧಿ ಧಾತ್ರಿ.

ಕೋಟಿ ಸೂರ್ಯನ ತೇಜಸ್ಸಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿರುವ ಸಿದ್ಧಿ ಧಾತ್ರಿ ತಾಯಿ ಚಿನ್ನದ ಬಣ್ಣದಿಂದ ಕಂಗೊಳಿಸುತ್ತಾಳೆ. ಈಕೆಗೆ 18 ಕೈಗಳು ಹಾಗೂ ಮೂರು ಕಣ್ಣುಗಳಿವೆ. ಕಿರೀಟದ ಮುಕುಟದಲ್ಲಿ ಈಕೆ ಚಂದ್ರನನ್ನು ಧರಿಸಿದ್ದಾಳೆ.

ಮಾರ್ಕಂಡೇಯ ಪುರಾಣದ ಪ್ರಕಾರ ಎಲ್ಲ ರೀತಿಯ ಸಿದ್ಧಿಯನ್ನು ಕರುಣಿಸುವ ಈಕೆ ಸಿದ್ಧಿದೇವಿಯಾಗಿದ್ದಾಳೆ. ಈಕೆಯ ಪ್ರಾರ್ಥನೆಯಿಂದ ಎಲ್ಲ ರೀತಿಯ ಸಂಕಷ್ಟಗಳಿಂದ ರಕ್ಷಣೆ ಸಿಗುತ್ತದೆ. ಸರ್ವಕಾರ್ಯಗಳಲ್ಲಿಯೂ ವಿಜಯ ಪ್ರಾಪ್ತಿಯಾಗುತ್ತದೆ. ಸುಖ ಭೋಗಗಳನ್ನು ಕರುಣಿಸುತ್ತಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!