ದಿನ ಭವಿಷ್ಯ | ಈ ರಾಶಿಯವರಿಗೆ ಇಂದು ಅದೃಷ್ಟ ಕೈಕೊಡಲಿದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಫಲಪ್ರದ ದಿನ. ಹೊಸ ವ್ಯವಹಾರ ಆರಂಭಿಸಬಹುದು. ಕೌಟುಂಬಿಕ ಪರಿಸರ ಕೂಡ ಉಲ್ಲಾಸಕರ. ಶಾಪಿಂಗ್, ಸುತ್ತಾಟಕ್ಕೆ ಮನ ಮಾಡುವಿರಿ.

ವೃಷಭ
ಸಕಾಲದಲ್ಲಿ ಕಾರ್ಯ ಸಿದ್ಧಿ.ವೃತ್ತಿಯಲ್ಲಿ ಉನ್ನತಿ. ಕೌಟುಂಬಿಕ ಸಂಬಂಧ ವೃದ್ಧಿ.ಭಿನ್ನಮತ ನುಸುಳದಂತೆ ನೋಡಿಕೊಳ್ಳಿರಿ. ಆರ್ಥಿಕ ಬಿಕ್ಕಟ್ಟು ನಿವಾರಣೆ.

ಮಿಥುನ
ಉದ್ಯೋಗದಲ್ಲಿ ಪ್ರಗತಿ. ಉಪಯುಕ್ತ ಕಾರ್ಯ ಎಸಗಲು ಇಂದಿನ ದಿನ ಬಳಸಿಕೊಳ್ಳಿ. ದಿನ ವ್ಯರ್ಥ ಮಾಡಬೇಡಿ. ಆಪ್ತರ ಜತೆಗೆ ವಾದವಿವಾದ ನಡೆಯಬಹುದು.

ಕಟಕ
ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ. ಇದರಿಂದ ನಿಮ್ಮ ಜನಪ್ರಿಯತೆ ಹೆಚ್ಚುವುದು. ಸಂಗಾತಿ ಜತೆಗೆ ಉತ್ತಮ

ಸಿಂಹ
ಸಣ್ಣ ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳದಿರಿ.ಕೆಲವನ್ನು  ಲಘುವಾಗಿ ಪರಿಗಣಿಸಿದರೇ ನಿಮ್ಮ ಉದ್ವಿಗ್ನತೆ ಕಡಿಮೆ.ಆರ್ಥಿಕ ಬಿಕ್ಕಟ್ಟು. ಹೊಂದಾಣಿಕೆ.

ಕನ್ಯಾ
ಅದೃಷ್ಟ ಇಂದು ನಿಮ್ಮ ಕೈಕೊಡಬಹುದು. ಅದರಿಂದಾಗಿ ಸ್ವಲ್ಪ ಮಟ್ಟಿನ ಹಿನ್ನಡೆ ಅನುಭವಿಸುವಿರಿ.ವಾದವಿವಾದದಲ್ಲಿ ಸಿಲುಕುವಿರಿ.

ತುಲಾ
ಕಾರ್ಯ ಸಾಫಲ್ಯ. ನಿಮ್ಮ ಉದ್ದೇಶ ಈಡೇರುವುದು.ಬದ್ಧತೆ ಯಿಲ್ಲದ ಸಂಬಂಧವನ್ನು ಬೆಳೆಸಬೇಡಿ. ಸಂಬಂಧ ಬರಿದೇ ಕಾಲಕ್ಷೇಪಕ್ಕೆ ಇರುವುದಲ್ಲ.

ವೃಶ್ಚಿಕ
ಸರಿಯಾದ ಸಮಯದಲ್ಲಿ ನಿಮ್ಮ ಕಾರ್ಯ ಮುಗಿದು ಮನಸ್ಸಿಗೆ ನಿರಾಳತೆ.ಕೌಟುಂಬಿಕ ಸಮ್ಮಿಲನ. ಆರ್ಥಿಕ ಪರಿಸ್ಥಿತಿ ಸುಧಾರಣೆ, ಅನಿರೀಕ್ಷಿತ ಧನಲಾಭ.

ಧನು
ದಿನವು ನೀವು ಬಯಸಿದಂತೆ ಸಾಗಲಿದೆ. ದೂರದಿಂದ ಶುಭಸುದ್ದಿ ಕೇಳುವಿರಿ. ಕುಟುಂಬ ಸದಸ್ಯರ ಜತೆ ಅನವಶ್ಯ ವಾಗ್ವಾದಕ್ಕೆ ಇಳಿಯಬೇಡಿ.

ಮಕರ
ಆತ್ಮೀಯ ಸಂಬಂಧ ವೊಂದು ಹದಗೆಡುವ  ಸಂಕೇತ ತೋರುವುದು. ಹಾಗಾಗದಂತೆ ಎಚ್ಚರಿಕೆ ವಹಿಸಿ. ಕೆಲ ವಿಷಯಗಳಲ್ಲಿ ನಿಮ್ಮಿಂದ ಹೊಂದಾಣಿಕೆ ಅಗತ್ಯ.

ಕುಂಭ
ಪ್ರಮುಖ ನಿರ್ಧಾರ ತಾಳುವಾಗ ಎಚ್ಚರ ವಹಿಸಿ. ಸಾಧಕಬಾಧಕ ನೋಡಿಕೊಳ್ಳಿ. ಇತರರ ಪ್ರಭಾವಕ್ಕೆ ಒಳಗಾಗದಿರಿ. ಸಮಾಧಾನದಿಂದ ಯೋಜನೆ ಜಾರಿಗೊಳಿಸಿ.

ಮೀನ
ವೃತ್ತಿಯಲ್ಲಿ ಕೆಲವು ಸವಾಲು.  ಕೌಶಲ್ಯ ಉಪಯೋಗಿಸಿ ಕಾರ್ಯ ಎಸಗಿರಿ. ಪ್ರೀತಿಪಾತ್ರರ ಜತೆ ಆತ್ಮೀಯವಾಗಿ ವರ್ತಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!