ರಂಗೂನ್ ಜೈಲಿನಲ್ಲಿ ನಾನಾ ಕಷ್ಟ ಅನುಭವಿಸಿದ್ದರು ಅರ್ಜುನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಅರ್ಜುನ್ ಸ್ವೈನ್ ಅವರು ಖೋರ್ಧಾ ಜಿಲ್ಲೆಯ ಬಾನ್ಪುರ್ ಬಳಿಯ ಪ್ರತಾಪ್ ಗ್ರಾಮದಲ್ಲಿ 1918 ರ ಸೆಪ್ಟೆಂಬರ್ 26 ರಂದು ಜನಿಸಿದರು. ಅವರ ತಂದೆಯ ಹೆಸರು ನಿತ್ಯಾನಂದ ಸ್ವೈನ್. ಅರ್ಜುನ್ ಅವರು 1939 ರಲ್ಲಿ ಜೀವನೋಪಾಯವನ್ನು ಹುಡುಕಿಕೊಂಡು ಮ್ಯಾನ್ಮಾರ್‌ಗೆ ಹೋದರು. 1943 ರಲ್ಲಿ, ‘ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆʼ ಎಂಬ ನೇತಾಜಿಯವರ ಕರೆಯಿಂದ ಪ್ರೇರಿತರಾಗಿ ಅವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಸೇರಿದರು. ಗೋಸಾಲ ತರಬೇತಿ ಕೇಂದ್ರದಲ್ಲಿ ಎರಡನೇ ಲೆಫ್ಟಿನೆಂಟ್ ಎನ್.ಸಿ. ದಾಸ್ ಅವರಿಂದ ತರಬೇತಿ ಪಡೆದರು. ಐಎನ್‌ಎ ಸೋಲಿನ ನಂತರ ಅವರನ್ನು ಬಂಧಿಸಲಾಯಿತು ಮತ್ತು ಒಂಬತ್ತು ತಿಂಗಳ ಕಾಲ ರಂಗೂನ್ ಕೇಂದ್ರ ಕಾರಾಗೃಹದಲ್ಲಿದ್ದರು. ದಿನಕ್ಕೆ ಒಮ್ಮೆ ಮಾತ್ರ ಊಟ ಬಡಿಸುತ್ತಿದ್ದು, ಹಗಲಿಡೀ ದುಡಿಸಿಕೊಳ್ಳಲಾಗುತ್ತಿತ್ತು. ಬೆಳಗ್ಗೆ ಆರು ಗಂಟೆ ದುಡಿದಿದ್ದಕ್ಕೆ ಒಂದು ರೂಪಾಯಿ ವೇತನ ಪಡೆಯುತ್ತಿದ್ದರು. ಬಿಡುಗಡೆಯಾದ ನಂತರ ಅವರು ತಮ್ಮ ಮನೆಗೆ ಮರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!