ದಿನಭವಿಷ್ಯ | ಕೌಟುಂಬಿಕ ಸಮ್ಮಿಲನದಿಂದ ಮನಸ್ಸಿಗೆ ಆನಂದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಖಾಸಗಿ ಬದುಕು ಮತ್ತು ವೃತ್ತಿ ಎರಡರಲ್ಲೂ ಹೆಚ್ಚು ಹೊಣೆಗಾರಿಕೆ. ಇತರರ ಸಹಕಾರ ಪಡೆಯುವಿರಿ. ಬಾಂಧವ್ಯದ ವಿಷಯ ವೊಂದು ಆತಂಕ ಸೃಷ್ಟಿಸುವುದು.

ವೃಷಭ
ಕಾರ್ಯದಲ್ಲಿ ತಪ್ಪು ಘಟಿಸಬಹುದು. ಹಾಗಾಗಿ ಎಚ್ಚರಿಕೆ ಅವಶ್ಯ. ಇತರರ ಕೋಪಕ್ಕೆ ಗುರಿ ಯಾಗುವ ಸಂಭವ. ತಾಳ್ಮೆ ಕಳಕೊಳ್ಳದಿರಿ.

ಮಿಥುನ
ಕಾರ್ಯದಲ್ಲಿ ವಿಘ್ನ. ಹಾಗಾಗಿ ಕೆಲಸ ಕೈಗತ್ತಿಕೊಳ್ಳುವ ಮುನ್ನ ಯೋಚಿಸಿರಿ. ಮನೆಯಲ್ಲಿ ಅಹಂ ಸಂಘರ್ಷ ಉಂಟಾದೀತು.

ಕಟಕ
ಹಿರಿಯರಿಂದ ಒತ್ತಡ ಎದುರಿಸುವಿರಿ. ಕೆಲವು ಕಾರ್ಯ ಇಂದೇ ಮುಗಿಸಬೇಕಾದ ಅನಿವಾರ್ಯತೆ. ಹಾಗೆಂದು ಅವಸರ ದಿಂದ ತಪ್ಪೆಸಗಬೇಡಿ.

ಸಿಂಹ
ಯಾವುದೇ ಯೋಜನೆ ಯೊಂದಿಗೆ ಕೆಲಸ ಆರಂಭಿಸಬೇಡಿ. ಅದು ಫಲಿಸದು. ಆದರೆ ಯಾವುದೇ ಲೆಕ್ಕಾಚಾರ ಹಾಕದಿದ್ದರೂ ನಿಮಗೆ ಒಳಿತೇ ಆಗುತ್ತದೆ.

ಕನ್ಯಾ
ಇಂದು ಆಂಶಿಕ ಯಶಸ್ಸು. ಹಾಗಾಗಿ ಕೆಲಸವನ್ನು ಅತೀವ ಶ್ರಮಪಟ್ಟು ಮಾಡದಿರಿ. ಪ್ರತಿಫಲ ಕಂಡು ನಿರಾಶೆ ಪಡದಿರಿ. ಕೌಟುಂಬಿಕ ಸಹಕಾರ, ಸಾಮರಸ್ಯ.

ತುಲಾ
ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ಅತೀವ ಒತ್ತಡ, ಹೊಣೆಗಾರಿಕೆ. ಆರ್ಥಿಕ ಮುಗ್ಗಟ್ಟು ಬಾಧಿಸಬಹುದು. ಮಿತವ್ಯಯಕ್ಕೆ ಆದ್ಯತೆ ಕೊಡಿರಿ.

ವೃಶ್ಚಿಕ
ಖಾಸಗಿ ಬದುಕು ಮತ್ತು ವೃತ್ತಿಯ ಮಧ್ಯೆ ಹೊಂದಾಣಿಕೆ ಸಾಧಿಸಲು ಕಷ್ಟ ಪಡುವಿರಿ. ಕೆಲವರಿಂದ ಒತ್ತಡವನ್ನೂ ಎದುರಿಸುವಿರಿ

ಧನು
ನಿಮಗಿಂದು ತಾಳ್ಮೆ ಬೇಕು. ಸಣ್ಣ ತಪ್ಪುಗಳು ದೊಡ್ಡ ಪರಿಣಾಮ ಬೀರಬಹುದು. ಮಾತುಗಳು ಹದ ತಪ್ಪದಿರನೋಡಿಕೊಳ್ಳಿ. ಸಂಬಂಧ ಉಳಿಸಿರಿ.

ಮಕರ
ಭಾವನೆಗಳ ತಾಕಲಾಟ. ಆಪ್ತರೊಂದಿಗೆ ಭಾವುಕ ಸನ್ನಿವೇಶಕ್ಕೆ ಈಡಾಗುತ್ತೀರಿ. ಕೆಲವರ ವರ್ತನೆ ಅಸಹನೀಯ ಎನ್ನಿಸಬಹುದು. ಸಹನೆ ಕಾಯ್ದುಕೊಳ್ಳಿರಿ.

ಕುಂಭ
ಕೌಟುಂಬಿಕ ಸಮ್ಮಿಲನ. ಇದರಿಂದ ಮನಸ್ಸಿಗೆ ಆನಂದ. ವೃತ್ತಿಯಲ್ಲಿ ಸಣ್ಣ ಸಮಸ್ಯೆ ತಲೆಯೆತ್ತಬಹುದು. ಅದನ್ನು ಬೇಗನೆ ಪರಿಹರಿಸಿಕೊಳ್ಳಿ.

ಮೀನ
ಉತ್ಸಾಹದ ದಿನ. ಹಣಕ್ಕೆ ಸಂಬಂಧಿಸಿದ ವಿಚಾರವನ್ನು ತೃಪ್ತಿಕರವಾಗಿ ಇತ್ಯರ್ಥ ಮಾಡುವಿರಿ. ಸಮೀಪ ಬಂಧುಗಳಿಂದ ಉತ್ತಮ ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!