ದಿನಭವಿಷ್ಯ | ಕಳೆದ ಕಾಲದ ಬಗ್ಗೆ ಕೊರಗದಿರಿ, ವರ್ತಮಾನವೂ ಮುಖ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೇಷ
ಹೆಚ್ಚು ಕೆಲಸ, ಹೆಚ್ಚು ಒತ್ತಡ. ಆದರೆ ಅದನ್ನೂ ಮೀರಿಸುವ ಉತ್ಸಾಹವೂ ನಿಮ್ಮಲ್ಲಿದೆ. ಇಂದು ಯಾವುದೇ ಹಿನ್ನಡೆ ನಿಮ್ಮನ್ನು ಬಾಧಿಸದು. ಸಂತೋಷದ ದಿನ.

ವೃಷಭ
ಅನಿರೀಕ್ಷಿತ ಖರ್ಚು. ದೂರ ಪ್ರಯಾಣದ ಸಾಧ್ಯತೆಯಿದೆ. ಪ್ರಯಾಣದ ಉದ್ದೇಶ ಪೂರ್ಣವಾಗಿ ಫಲಿಸದು. ಬಂಧುತ್ವ ವೃದ್ಧಿಸುವುದು.

ಮಿಥುನ
ಧಾರ್ಮಿಕ ವಿಚಾರ, ಅಧ್ಯಾತ್ಮ ನಿಮ್ಮನ್ನು ಆಕರ್ಷಿಸಬಹುದು. ಆದರೆ ನಿಮ್ಮ ಹೊಣೆ ಗಾರಿಕೆಯಿಂದ ಜಾರಿ ಕೊಳ್ಳಬೇಡಿ. ಕರ್ತವ್ಯ ಮರೆಯಬೇಡಿ.

ಕಟಕ
ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ಆದ್ಯತೆ ಕೊಡಿ. ಸಣ್ಣ ವಿಷಯಗಳು ಸಂಬಂಧ ಕೆಡಿಸಲು ಆಸ್ಪದ ಕೊಡಬೇಡಿ. ಮಾತು ಹಿತವಾಗಿರಲಿ.

ಸಿಂಹ
ಆಪ್ತರ ಜತೆ  ಭಾವನೆ ಹಂಚಿಕೊಳ್ಳುವಲ್ಲಿ ಹಿಂಜರಿಕೆ ಬೇಡ. ಅದರಿಂದ ಮನಸ್ಸು ನಿರಾಳವಾದೀತು. ಇತರರ ಟೀಕೆಗೆ  ಹೆಚ್ಚು ಗಮನ ಕೊಡಬೇಡಿ.

ಕನ್ಯಾ
ನಿಮ್ಮ ಕೆಲಸದ ಬಗ್ಗೆ ಗಂಭೀರ ಗಮನ ಹರಿಸಬೇಕು. ಅದನ್ನು ಕಡೆಗಣಿಸುವುದು ಸಲ್ಲದು. ಕುಟುಂಬದಲ್ಲಿ ಅಸಮಾಧಾನ ಉಂಟಾದೀತು.

ತುಲಾ
ಹದಗೆಟ್ಟ ಬಾಂಧವ್ಯ ಸುಧಾರಿಸಲು ಗಮನ ಕೊಡಿ. ನಿಮ್ಮ ನಿಲುವಿನಲ್ಲಿ  ಸಡಿಲಿಕೆ ಅವಶ್ಯ. ಇತರರ ತಪ್ಪನ್ನೆ ಆಡಿಕೊಳ್ಳುವುದನ್ನು ಬಿಟ್ಟುಬಿಡಿ.

ವೃಶ್ಚಿಕ
ಭಾವನೆಗಳ ಏರುಪೇರು. ಅದನ್ನು  ಬದಿಗಿಟ್ಟು ಕರ್ತವ್ಯಕ್ಕೆ ಪ್ರಾಮುಖ್ಯತೆ ಕೊಡಿ. ನಿಮ್ಮ ಆಪ್ತರ ಬೇಡಿಕೆ ಈಡೇರಿಸಲು ಗಮನ ಕೊಡಬೇಕಾಗುವುದು.

ಧನು
ಹಳೆ ನೆನಪುಗಳು, ಹಳೆ ಸಂಗತಿಗಳು ಮನಸ್ಸು ಕೆಡಿಸುವ ರೀತಿ ಕಾಡಬಹುದು. ಕಳೆದುಹೋದುದಕ್ಕೆ ಕೊರಗದಿರಿ. ವರ್ತಮಾನ ಮುಖ್ಯ.

ಮಕರ
ನಿಮ್ಮ ನೇರ ನಡೆನುಡಿ ಕೆಲವರ ಮನಸ್ಸು ಘಾಸಿಗೊಳಿಸಬಹುದು. ಹಾಗಾಗಿ ಮಾತಿನ ಮೇಲೆ ನಿಯಂತ್ರಣ ವಿಡಿ. ಇಲ್ಲವಾದರೆ ಸಂಬಂಧ ಕೆಟ್ಟೀತು.

ಕುಂಭ
ಪ್ರೀತಿಯ ಆಕರ್ಷಣೆಗೆ ಒಳಗಾಗುವ ಸಂಭವ. ಪ್ರೇಮದ ವಿಷಯ ಬಿಟ್ಟು ಉಳಿದೆಲ್ಲವೂ ಗೌಣವಾಗುತ್ತದೆ. ಈ ದಿನ ನಿಮ್ಮದು, ಅದನ್ನು ಸದುಪಯೋಗಪಡಿಸಿ.

ಮೀನ
ಇಂದಿನದು ನೀರಸ ವಾದ ಏಕತಾನತೆಯ ದಿನ. ಗ್ರಹಗತಿಗಳೂ ಹೆಚ್ಚಿನದ್ದನ್ನು ಸೂಚಿಸುತ್ತಿಲ್ಲ. ವಿಶೇಷ ವೇನೂ ಇಂದು ಘಟಿಸದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!