ರಷ್ಯಾದಿಂದ ಹೆಚ್ಚಿದ ಕ್ಷಿಪಣಿ ದಾಳಿ : ಕೀವ್‌ ನಲ್ಲಿ ಕಡಿತಗೊಂಡ ವಿದ್ಯುತ್‌, ನೀರಿನ ಸರಬರಾಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉಕ್ರೇನ್‌ ಮೇಲೆ ರಷ್ಯಾವು ತನ್ನ ಡ್ರೋನ್‌ ಹಾಗೂ ಕ್ಷಿಪಣಿ ದಾಳಿಯನ್ನು ಹೆಚ್ಚಿಸಿದ್ದು ಉಕ್ರೇನಿನ ಕೀವ್‌, ಖಾರ್ಕೀವ್ಸೇರಿದಂತೆ ಇತರ ನಗರಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ. ತನ್ನ ಬ್ಲಾಕ್‌ ಸೀ ನೌಕಾಪಡೆಯ ಮೇಲೆ ಉಕ್ರೇನ್‌ ದಾಳಿಗೆ ಪ್ರತೀಕಾರವಾಗಿ ರಷ್ಯಾ ಸೋಮವಾರ ಈ ದಾಳಿಗಳನ್ನು ನಡೆಸಿದ್ದು ಉಕ್ರೇನಿನ ನಗರಗಳಲ್ಲಿ ಪ್ರಮುಖ ನೀರು ಹಾಗೂ ವಿದ್ಯತ್‌ ಸರಬರಾಜಿಗೆ ಧಕ್ಕೆಯುಂಟು ಮಾಡಿದೆ.

ಚಳಿಗಾಲ ಸಮೀಪಿಸುತ್ತಿರುವ ಬೆನ್ನಲ್ಲೇ ಉಕ್ರೇನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇತರ ಪ್ರಮುಖ ಮೂಲಸೌಕರ್ಯಗಳ ಮೇಲೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಇದು ಆ ಪ್ರದೇಶಗಳಲ್ಲಿ ತೀವ್ರ ವಿದ್ಯುತ್‌ ವ್ಯತ್ಯಯಕ್ಕೆ ಕಾರಣವಾಗಿದೆ.

“ಚಳಿಗಾಲದ ಮೊದಲು ವಿದ್ಯುತ್ ಮತ್ತು ಶಾಖವಿಲ್ಲದೆ ಉಳಿದಿರುವ ಶಾಂತಿಯುತ ಜನರ ಮೇಲೆ ಮಿಲಿಟರಿ ಕಾರಣಗಳಿಂದ ಕ್ರೆಮ್ಲಿನ್ ಸೇಡು ತೀರಿಸಿಕೊಳ್ಳುತ್ತಿದೆ” ಎಂದು ಕೈವ್ ಪ್ರದೇಶದ ಗವರ್ನರ್ ಒಲೆಕ್ಸಿ ಕುಲೆಬಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!