ದಿನಭವಿಷ್ಯ | ವೃತ್ತಿಯಲ್ಲಿ ಅದೃಷ್ಟ, ಉದ್ದೇಶಿಸಿದ ಗುರಿ ಸಾಧಿಸುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಹಣದ ವ್ಯವಹಾರದಲ್ಲಿ ಇಂದು ಹೆಚ್ಚು ಎಚ್ಚರ ವಹಿಸಬೇಕು. ಇತರರ ಮಾತು ಕೇಳಿ ಹಣ ಹೂಡಬೇಡಿ. ಕೌಟುಂಬಿಕ ಒತ್ತಡ, ಅಸಹಕಾರ.

ವೃಷಭ
ಹೆಚ್ಚು ಜಾಣ್ಮೆಯಿಂದ ವ್ಯವಹರಿಸಿರಿ. ಅದರಿಂದ ನಿಮಗೆ ಒಳಿತಾಗುವುದು. ನಿರ್ಲಕ್ಷ್ಯದ ನಡೆ ಹಿನ್ನಡೆ ತಂದೀತು. ಮುಖ್ಯ ವಿಚಾರದಲ್ಲಿ ಇತರರ ಸಲಹೆ ಪಡೆಯಿರಿ.

ಮಿಥುನ
ಆತ್ಮವಿಶ್ವಾಸ ಹೆಚ್ಚುವ ಬೆಳವಣಿಗೆ. ವೃತ್ತಿಯಲ್ಲಿ  ಯಾವುದೇ ಗೊಂದಲ ಇಲ್ಲದೆ, ನಿಖರವಾಗಿ ವ್ಯವಹರಿಸಿ. ನಿಮ್ಮ ನಿಲುವು ಸ್ಪಷ್ಟವಾಗಿರಲಿ. ಆರ್ಥಿಕ ಉನ್ನತಿ.

ಕಟಕ
ನಿಮ್ಮ ಆಪ್ತ ಭಾವನೆಯನ್ನು ಸಂಬಂಧಿಸಿದವರ ಜತೆ ಹಂಚಿಕೊಳ್ಳಿ. ಅದರಿಂದ ನಿರಾಳತೆ ಸಿಗುವುದು. ಮನಸ್ಸಲ್ಲೇ ಇಟ್ಟು ಕೊರಗಬೇಡಿ.

ಸಿಂಹ
ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಅವಕಾಶ ದೊರಕುವುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಕೆಲವರು  ಉತ್ಸಾಹ ಕುಂದಿಸಲು ಯತ್ನಿಸಿಯಾರು.

ಕನ್ಯಾ
ಎಂದಿಗಿಂತ ಭಿನ್ನವಾದ ದಿನ. ನಿಮ್ಮ ಆಕಾಂಕ್ಷೆ ಈಡೇರಿಕೆ. ವೃತ್ತಿ ಅಥವಾ ಖಾಸಗಿ ಬದುಕಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಆರ್ಥಿಕ ಸುಧಾರಣೆ.

ತುಲಾ
ಆತ್ಮೀಯ ಸಂಬಂಧ ವೊಂದು ಮುರಿಯುವ ಹಂತ ತಲುಪಬಹುದು.  ಆತುರದ ತೀರ್ಮಾನಕ್ಕೆ ಬರಬೇಡಿ. ಸಮಾಧಾನ ದಿಂದ ಯೋಚಿಸಿ, ಯುಕ್ತ ನಿರ್ಧಾರ ತಾಳಿ.

ವೃಶ್ಚಿಕ
ಕೆಲವು ದೈಹಿಕ ನೋವು  ಕಾಣಿಸಬಹುದು. ಸೂಕ್ತ ವೈದ್ಯಕೀಯ ಸಲಹೆ ಪಡೆಯಿರಿ. ಆರ್ಥಿಕ ನಷ್ಟ ಸಂಭವ. ಇತರರ ನಿರಾಶಾಜನಕ ಮಾತಿಗೆ ಕಿವಿಗೊಡದಿರಿ.

ಧನು
ನಿಮ್ಮ ಒಳ್ಳೆತನವನ್ನು ಎಲ್ಲರೂ ಮೆಚ್ಚುತ್ತಾರೆ. ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳಲೂ ಬಹುದು. ಆರೋಗ್ಯಕ್ಕೆ ಗಮನ ಕೊಡಿ.

ಮಕರ
ದೂರ ಪ್ರಯಾಣ ಸಂಭವ. ಉದ್ದೇಶ ಸಾಧನೆ. ಕೆಲವು ಸೂಕ್ಷ್ಮ ವಿಚಾರಗಳು ಮನಸ್ಸಿನ ನೆಮ್ಮದಿ ಕಲಕುತ್ತವೆ. ಆಪ್ತ ಸಂಬಂಧ ಕಡಿದುಕೊಳ್ಳದಿರಿ.

ಕುಂಭ
ವೃತ್ತಿಯಲ್ಲಿ ಕೆಲವು ಸಮಸ್ಯೆಗಳು. ಕೆಲವರ ಜತೆ ನಿಮಗೆ ಹೊಂದಾಣಿಕೆ ಕೂಡಿಬರುವುದಿಲ್ಲ. ಆರ್ಥಿಕ ಒತ್ತಡ, ಮಾನಸಿಕ ನೆಮ್ಮದಿ ನಾಶ.

ಮೀನ
ವೃತ್ತಿಯಲ್ಲಿ ಅದೃಷ್ಟ. ಉದ್ದೇಶಿಸಿದ ಗುರಿ ಸಾಧಿಸುವಿರಿ. ಆದರೆ ಅತಿಯಾದ ಕೆಲಸವು ಮಾನಸಿಕ ಒತ್ತಡಕ್ಕೂ ಕಾರಣವಾಗುವುದು. ಆರ್ಥಿಕ ಸದೃಢತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!