Thursday, February 29, 2024

ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು, ಒರ್ವ ಗಂಭೀರ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ನಡೆದಿದ್ದು, ಇದರಿಂದ ಮದ್ದೂರು ಪಟ್ಟಣದ ಶಿಂಷಾ ನದಿಯ ಬಳಿ ಇಬ್ಬರು ಸಾವನ್ನಪ್ಪಿದರು. ಅಪಘಾತದಲ್ಲಿ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

ಭೀಕರ ರಸ್ತೆಯಲ್ಲಿ ಶಂಕರ್ ಹಾಗೂ ಮಹದೇವು ಇಬ್ಬರು ಸಾವನ್ನಪ್ಪಿದ್ದಾರೆ. ಅವರು ಬೆಂಗಳೂರಿನ ಐಸಿಐಸಿಐ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸವನ್ನು ಮುಗಿಸಿ ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಹೊರಟಿದ್ದರು.

ಈ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಶಿಂಷಾ ನದಿಯ ಸೇತುವೆಯ ಮೇಲೆ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.ಈ ಪರಿಣಾಮವಾಗಿ ಕಾರು ಮಗುಚಿ ಬಿದ್ದಿದೆ.

ಡಿಕ್ಕಿಯ ರಭಸದಿಂದ ಮ್ಯಾನೇಜರ್ ಶಂಕರ್ ಹಾಗೂ ಮಹದೇವು ಸ್ಥಳದಲ್ಲಿ ಸಾವನ್ನಪ್ಪಿದರು. ಕಿಶೋರ್​​ಗೆ ಗಂಭೀರ ಗಾಯವಾಗಿದ್ದು, ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದ್ದೂರು ಸಂಚಾರಿ ಪೊಲೀಸರು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ಸಂಚಾರ ಪೋಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!