ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ್ ಜೋಡೊ ಯಾತ್ರೆಯ ಎರಡನೇ ಹಂತವಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರಥ್ಯದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಇಂದು ಮಣಿಪುರದಲ್ಲಿ ಆರಂಭವಾಗುತ್ತಿದೆ.
ಈ ಯಾತ್ರೆಯ ಉದ್ಘಾಟನೆಯಲ್ಲಿ ಕಾಂಗ್ರೆಸ್ ಆಡಳಿತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಹಿತ ಕಾಂಗ್ರೆಸ್ ನಾಯಕರು , ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಇದು ಚುನಾವಣಾ ಯಾತ್ರೆಯಲ್ಲ, ಇದೊಂದು ಸೈದ್ಧಾಂತಿಕ ಯಾತ್ರೆ. ನಮ್ಮ ರಾಜಕೀಯ ಉದ್ದೇಶ ಸಂವಿಧಾನ, ಸಂವಿಧಾನದ ಪ್ರಸ್ತಾವನೆ, ಅದರ ತತ್ತ್ವಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ರಕ್ಷಿಸುವುದು ಈ ಯಾತ್ರೆಯ ಉದ್ದೇಶ ಎಂದು ಪಕ್ಷ ಹೇಳಿದೆ.