ಹೊಸದಿಗಂತ ಕುಶಾಲನಗರ:
ಜಮೀನಿನ ಉಳುಮೆ ಮಾಡುವ ಸಂದರ್ಭ ಟ್ರ್ಯಾಕ್ಟರ್ ಮಗುಚಿಕೊಂಡ ಪರಿಣಾಮ ಚಾಲಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸರಿಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಜಮೀನಿನ ಉಳುಮೆ ಮಾಡುತ್ತಿದ್ದ ಆದಿಶೇಷ (37) ಎಂಬವರೇ ಸಾವಿಗೀಡಾದವರು.
ಬುಧವಾರ ರಾತ್ರಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಬೃಹತ್ ಕಲ್ಲಿನ ಮೇಲೆ ಹತ್ತಿದ ಟ್ರ್ಯಾಕ್ಟರ್ ಮಗುಚಿಕೊಂಡಿದೆ.
ಈ ಸಂದರ್ಭ ಟ್ರ್ಯಾಕ್ಟರ್ ಅಡಿ ಭಾಗದಲ್ಲಿ ಸಿಲುಕಿದ ಆದಿಶೇಷ ಸ್ಧಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಗಂಡು ಮಕ್ಕಳನ್ನು ಅಗಲಿದ್ದಾರೆ.
ಮೃತ ದೇಹವನ್ನು ಕುಶಾಲನಗರ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ನೀಡಲಾಯಿತು. ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.