ಲಂಡನ್‌ನಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯ ಪಿಎಚ್‌ಡಿ ವಿದ್ಯಾರ್ಥಿನಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲಂಡನ್‌ನಲ್ಲಿ (London) ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ನೀತಿ ಆಯೋಗದ (NITI Ayog) ಮಾಜಿ ಉದ್ಯೋಗಿ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ (ಎಲ್‌ಎಸ್‌ಇ) ಓದುತ್ತಿದ್ದ 33 ವರ್ಷದ ಭಾರತೀಯ ವಿದ್ಯಾರ್ಥಿನಿ (Indian student ) ಕಳೆದ ವಾರ ಲಂಡನ್‌ನಲ್ಲಿ (London) ಟ್ರಕ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ಮೃತರನ್ನು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ. ಕೊಚ್ಚರ್ (Cheistha Kochar) ಎಂದು ಗುರುತಿಸಲಾಗಿದೆ.

ಕೊಚ್ಚರ್ ಎಲ್‌ಎಸ್‌ಇ ಸಂಸ್ಥೆಯಲ್ಲಿ ಬಿಹೇವಿಯರಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.. ಈ ಹಿಂದೆ ಅವರು ನೀತಿ ಆಯೋಗ್‌ನಲ್ಲಿ (ಎನ್‌ಐಟಿಐ) ಕೆಲಸ ಮಾಡಿದ್ದರು.

ಆಕೆಯ ತಂದೆ, ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ. ಕೊಚ್ಚಾರ್ ಅವರು ತಮ್ಮ ಮಗಳನ್ನು ನೆನಪಿಸಿಕೊಂಡು ಭಾವನಾತ್ಮಕ ಲಿಂಕ್ಡ್‌ಇನ್ ಪೋಸ್ಟ್ ಅನ್ನು ಬರೆದಿದ್ದಾರೆ.“ನಾನು ಇನ್ನೂ ಲಂಡನ್‌ನಲ್ಲಿ ನನ್ನ ಮಗಳು ಚೀಸ್ತಾ ಕೊಚ್ಚರ್ ಅವರ ಅವಶೇಷಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇನೆ. ಮಾರ್ಚ್ 19 ರಂದು ಅವರು ಪಿಎಚ್‌ಡಿ ಮಾಡುತ್ತಿದ್ದ ಎಲ್‌ಎಸ್‌ಇ ಸಂಸ್ಥೆಯಿಂದ ಸೈಕ್ಲಿಂಗ್ ಮಾಡುತ್ತಾ ವಾಪಸಾಗುತ್ತಿದ್ದಾಗ ಕಸದ ಟ್ರಕ್‌ ಆಕೆಯ ಮೇಲೆ ಸವಾರಿ ಮಾಡಿಕೊಂಡುಹೋಗಿದೆ ಎಂದಿದ್ದಾರೆ.

ಚೈಸ್ತಾ ಕೊಚ್ಚರ್ ಹರಿಯಾಣದ ಗುರುಗ್ರಾಮ್ ನಿವಾಸಿಯಾಗಿದ್ದು, ದೆಹಲಿ ವಿಶ್ವವಿದ್ಯಾಲಯ, ಅಶೋಕ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ಮತ್ತು ಚಿಕಾಗೋ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಉನ್ನತ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಸೆಪ್ಟೆಂಬರ್ 2023 ರಲ್ಲಿ ಲಂಡನ್‌ಗೆ ತೆರಳಿದ್ದರು.

ಎನ್‌ಐಟಿಐ ಆಯೋಗ್‌ನ ಮಾಜಿ ಸಿಇಒ ಅಮಿತಾಬ್ ಕಾಂತ್ ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಕೊಚಾರ್ ಸಾವಿನ ಸುದ್ದಿಯನ್ನು ಪೋಸ್ಟ್ ಮಾಡಿದ್ದಾರೆ.’ಚೀಸ್ತಾ ಕೊಚಾರ್ ನನ್ನೊಂದಿಗೆ NITI ಆಯೋಗದಲ್ಲಿ ಲೈಫ್ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ Ph.D ವ್ಯಾಸಾಂಗಕ್ಕೆ ಹೋಗಿದ್ದರು. ಲಂಡನ್‌ನಲ್ಲಿ ಸೈಕ್ಲಿಂಗ್ ಮಾಡುವಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಧೈರ್ಯಶಾಲಿ ಹೆಣ್ಣು, ಸದಾ ಜೀವನೋತ್ಸಾಹದಿಂದ ಇರುತ್ತಿದ್ದರು. ತುಂಬ ಬೇಗ ಇಹಲೋಕ ತ್ಯಜಿಸಿಬಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅಮಿತಾಭ್ ‌ಪೋಸ್ಟ್‌ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!