ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಭಿಕ್ಷೆ ನೀಡಿ: ಕಾಂಗ್ರೆಸ್ ಮುಖಂಡ ಹಂಚಿಕೊಂಡರು ಡಿಜಿಟಲ್ ಭಿಕ್ಷುಕನ ವಿಡಿಯೋ!

 ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಣ್ಣು ಕಾಣದ ವ್ಯಕ್ತಿಯೋರ್ವರು ಅಸ್ಸಾಂನ ಗುವಾಹಟಿಯಲ್ಲಿ ಕ್ಯೂಆರ್ ಕೋಡ್‌ಗಳನ್ನು ಬಳಸಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಮಾಡುತ್ತಿದೆ.

ಈ ವಿಡಿಯೋವನ್ನು ಕಾಂಗ್ರೆಸ್ ನಾಯಕ ಗೌರವ್ ಸೋಮಾನಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ಗುವಾಹಟಿಯಲ್ಲಿ ಒಂದು ಅದ್ಭುತ ದೃಶ್ಯ ಕಂಡುಬಂದಿದೆ. ಭಿಕ್ಷುಕನೊಬ್ಬ ಫೋನ್‌ಪೇ ಬಳಸಿ ಭಿಕ್ಷೆ ಕೇಳುತ್ತಿದ್ದಾನೆ. ತಂತ್ರಜ್ಞಾನಕ್ಕೆ ಯಾವುದೇ ಮಿತಿಗಳಿಲ್ಲ. ಇದು ಸಾಮಾಜಿಕ ಆರ್ಥಿಕ ಸ್ಥಿತಿಯ ಅಡೆತಡೆಗಳನ್ನು ಸಹ ಮೀರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಈ ಭಿಕ್ಷುಕನ ಹೆಸರನ್ನು ದಶರಥ ಎಂದು ಹೇಳಲಾಗುತ್ತಿದೆ. ಇವರು ಭಿಕ್ಷೆಯ ರೂಪದಲ್ಲಿ ಜನರಿಂದ ಡಿಜಿಟಲ್ ಪಾವತಿಯನ್ನು ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!